ಬಸವರಾಜ ಹೊರಟ್ಟಿ 
ರಾಜಕೀಯ

ಎಂಎಲ್‌ಸಿ ಟಿ.ಎ.ಶರವಣಗೆ ಡಿಮ್ಯಾಂಡ್ ಮಾಡಿದ್ದ ಅಶ್ವಿನ್ ರಾವ್

ಆಭರಣ ವ್ಯಾಪಾರಿಯಾಗಿರುವ ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್‌ರಾವ್ ಅವರ ಮಗ...

ಬೆಂಗಳೂರು/ವಿಧಾನಪರಿಷತ್: ಆಭರಣ ವ್ಯಾಪಾರಿಯಾಗಿರುವ ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್‌ರಾವ್ ಅವರ ಮಗ ಅಶ್ವಿನ್ ರಾವ್ ಅವರು 25 ಲಕ್ಷ ಮೌಲ್ಯದ ವಜ್ರದಾಭರಣಕ್ಕೆ ಡಿಮ್ಯಾಂಡ್ ಮಾಡಿಗ ಸಂಗತ ಸದನದಲ್ಲಿ ಪ್ರಸ್ತಾಪಗೊಂಡಿತು.

ಲೋಕಾಯುಕ್ತ ಮೇಲೆನಿ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಕೆಲವು ತಿಂಗಳ ಹಿಂದೆ(ಏಪ್ರಿಲ್ 18) ಶರವಣ ಅವರು ಕರೆ ಮಾಡಿ ಲೋಕಾಯುಕ್ತರ ಕಚೇರಿಯಿಂದ ಕರೆ ಬಂದಿದೆ. ಕುಮಾರ ಕೃಪಾ ಗೆಸ್ಟ್ ಹೌಸ್‌ಗೆ ಬರುವಂತೆ ಹೇಳುತ್ತಿದ್ದಾರೆ ಏನು ಮಾಡಲಿ ಎಂದು ಕೇಳಿದರು. ನಾನು ಅನುಮಾನ ವ್ಯಕ್ತಪಡಿಸಿ ಅಲ್ಲಿಗೆ ಹೋಗುವಂತೆ ತಿಳಿಸಿದೆ.

ಶರವಣ ಅವರು ಅಲ್ಲಿಗೆ ಹೋದಾಗ ಲೋಕಾಯುಕ್ತರ ಮಗ 25 ಲಕ್ಷ ರುಪಾಯಿ ಮೌಲ್ಯದ ವಜ್ರದಾಭರಣ ಮಾಡಿಸಿಕೊಡುವಂತೆ ಕೋರಿಕೆ ಇಟ್ಟಿದ್ದಾರೆ. ಏಕೆ ಮಾಡಿಕೊಡಬೇಕೆಂದು ಕೇಳಿದ್ದಾರೆ. ನಂತರ ಕರೆ ಮಾಡಿದರೂ ಶರವಣ ಹೋಗಲಿಲ್ಲ ಎಂದರು. ಈ ಪ್ರಕರಣದ ವಿಷಯ ಕೇಳಿ ಇಡೀ ಸದನ ಹೌಹಾರಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತದ ರಕ್ಷಣಾ ರಫ್ತು ಇತಿಹಾಸದಲ್ಲೇ ದಾಖಲೆಯ ಏರಿಕೆ!, ಖರೀದಿದಾರರು ಯಾರು?

ಭಾರತದತ್ತ ಹೊರಟಿದ್ದ ಇರಾನ್ ತೈಲ ಹೊತ್ತ ಹಡಗು ಏಕಾಏಕಿ ಚೀನಾಗೆ ರೀ-ರೂಟ್; ಕೇಂದ್ರ ಹೇಳಿದ್ದೇನು?

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

SCROLL FOR NEXT