ವಿಧಾನ ಪರಿಷತ್ 
ರಾಜಕೀಯ

ಮೇಲ್ಮನೆ ವಿಸರ್ಜಿಸಿ: ಜೆಡಿಎಸ್ ಶಾಸಕನಿಂದ ಖಾಸಗಿ ನಿರ್ಣಯ

ದೇಶದ ಬಹು ರಾಜ್ಯಗಳಲ್ಲಿ ಇಲ್ಲದ ವಿಧಾನ ಪರಿಷತ್ತು ರಾಜ್ಯದಲ್ಲಿ ಸಹ ಇರುವುದು ಅವಶ್ಯಕವೆನಿಸುವುದಿಲ್ಲ. ಆದ ಕಾರಣ ರಾಜ್ಯ ವಿಧಾನ ಪರಿಷತ್ತನ್ನು ವಿಸರ್ಜನೆ ಮಾಡಬೇಕೆಂಬ....

ಬೆಂಗಳೂರು: ದೇಶದ ಬಹು ರಾಜ್ಯಗಳಲ್ಲಿ ಇಲ್ಲದ ವಿಧಾನ ಪರಿಷತ್ತು ರಾಜ್ಯದಲ್ಲಿ ಸಹ ಇರುವುದು ಅವಶ್ಯಕವೆನಿಸುವುದಿಲ್ಲ. ಆದ ಕಾರಣ ರಾಜ್ಯ ವಿಧಾನ ಪರಿಷತ್ತನ್ನು ವಿಸರ್ಜನೆ ಮಾಡಬೇಕೆಂಬ ತಿದ್ದುಪಡಿ ತರುವ ನಿರ್ಣ ಯವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಅವಕಾಶ ನೀಡಬೇಕೆಂದು ತುರುವೆಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ವಿಧಾನ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ವಿವಿಧ ವಲಯದಲ್ಲಿ ಅನುಭವ ಹಾಗೂ ವಿಶೇಷ ಜ್ಞಾನ ಹೊಂದಿರುವ ಸದಸ್ಯರನ್ನು ನಾಮನಿರ್ದೇಶನ ಮಾಡುವುದರ ಮೂಲಕ 1907ರಲ್ಲಿ ಕರ್ನಾಟಕ ವಿಧಾನಪರಿಷತ್ತನ್ನು ಸ್ಥಾಪಿಸಲಾಗಿದೆ. ಆದರೆ, ಇತ್ತೀಚಿನ ದಿನ ಗಳಲ್ಲಿ ಪ್ರಸ್ತಾಪಿಸಿದ ವಿಭಾಗದಲ್ಲಿ ಪರಿಣಿತ ಹೊಂದಿರುವ ಅನುಭವಸ್ಥರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಪದ್ದತಿಯನ್ನು ಅನುಸರಿಸದೆ ರಾಜಕೀಯ ಒತ್ತಡದಿಂದ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ ವ್ಯಕ್ತಿಗಳಿಗೆ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುತ್ತಿರು ವುದರಿಂದ ವಿಧಾನ ಪರಿಷತ್ತಿನ ಘನತೆಗೆ ಕುಂದುಂಟಾಗುತ್ತಿದೆ' ಎಂದು ತಮ್ಮ ಕೋರಿಕೆಯಲ್ಲಿ ವಿವರಿಸಿದ್ದಾರೆ.

ಈ ಕುರಿತಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣಪ್ಪ ಅವರು, ವಿಧಾನ ಪರಿಷತ್ತಿನಲ್ಲಿ ಕೇವಲ ಲಾಬಿಯ ಮುಖಾಂತರ ವಿಧಾನ ಪರಿಷತ್ತಿಗೆ ಬಂದಿರುತ್ತಾರೆ. ಜಾತಿ ಮುಖೇನ, ಲ್ಯಾಂಡ್ ಮಾಫಿಯಾ ಹಾಗೂ ಲಿಕ್ಕರ್ ಮಾಫಿಯಾದವರಿದ್ದಾರೆ. ವಿಧಾನ ಪರಿಷತ್ತಿನ ಮೂಲ ಉದ್ದೇಶ ಹಾಳಾಗಿದ್ದು, ಪರಿಷತ್ತಿನ ಪ್ರತಿ ವರ್ಷ ತಗಲುವ ವೆಚ್ಚ 34.46 ಕೋಟಿ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಕೊಡುವ 3 ಕೋಟಿ ಅನುದಾನ ಕೂಡ ಉದ್ದೇಶ ರಹಿತ ಎಂದು ಟೀಸಿದ್ದಾರೆ.

ಪರಿಷತ್ ಸದಸ್ಯರು ಸಾಮಾನ್ಯ ಜನರೊಂದಿಗೆ ಸ್ಪಂದಿಸುವುದಿಲ್ಲ, ಯಾವುದೇ ಜವಾಬ್ದಾರಿ ಕೂಡ ಇರುವುದಿಲ್ಲ. ಆದ್ದರಿಂದ ಇವರಿಗೆ ನೀಡುವ ಎಲ್ಲಾ ಸವಲತ್ತು ಹಾಗೂ ಅನುದಾನ ರಾಜ್ಯದ ಜನರಿಗೆ ಹೊರೆಯಾಗುತ್ತದೆ. 30 ರಾಜ್ಯಗಳ ಪೈಕಿ 25 ರಾಜ್ಯಗಳಲ್ಲಿ ವಿಧಾನ ಪರಿಷತ್ ಇಲ್ಲ. ಪರಿಷತ್ ಇಲ್ಲದ ರಾಜ್ಯಗಳಲ್ಲಿ ಸಹ ಆಡಳಿತ ಮತ್ತು ಕಾನೂನು ವ್ಯವಸ್ಥೆ ಸುಗಮವಾಗಿದೆ. ಇವೆಲ್ಲವನ್ನೂ ಮನಗಂಡು ವಿಧಾನ ಪರಿಷತ್ತನ್ನು ವಿಸರ್ಜನೆ ಮಾಡಿ ಖಜಾನೆ ಹಣವನ್ನು ಉಳಿತಾಯ ಮಾಡಿ ರಾಜ್ಯದ ಜನತೆಗೆ ಒಳ್ಳೆಯ ಕಾರ್ಯ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.ಅಬಿsಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ಹಲವು ವಾಹನಗಳಿಗೆ ಬೆಂಕಿ: ನಾಲ್ವರು ಸಾವು, 25 ಮಂದಿ ಗಾಯ-Video

ಜಮ್ಮು-ಕಾಶ್ಮೀರದ ಉಧಂಪುರ್ ನಲ್ಲಿ ಎನ್ ಕೌಂಟರ್: ಪೊಲೀಸ್ ಹುತಾತ್ಮ

ಧನುರ್ಮಾಸ ಆರಂಭ: ಶೂನ್ಯ ಮಾಸದ ಪೂಜಾಫಲವೇನು: ಹುಗ್ಗಿ ಸೇವೆ ಮಾಡುವುದೇಕೆ? ಲಕ್ಷ್ಮಿ ನಾರಾಯಣರ ಅನುಗ್ರಹ ಪಡೆಯುವುದು ಹೇಗೆ?

ಕಳೆದ ಎರಡೂವರೆ ವರ್ಷಗಳಲ್ಲಿ 2,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ, ದೇಶದಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ: ಸಚಿವ ಚಲುವರಾಯಸ್ವಾಮಿ

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 5ನೇ ತರಗತಿವರೆಗಿನ ವಿದ್ಯಾರ್ಥಿಗಳ ದೈಹಿಕ ತರಗತಿಗಳಿಗೆ ಬ್ರೇಕ್!

SCROLL FOR NEXT