ರಾಜಕೀಯ

ಸಂಪುಟ ಸಂಕಷ್ಟ ಸದ್ಯಕ್ಕೆ ದೂರ: ಎಐಸಿಸಿ ಅಧಿವೇಶನದವರೆಗೆ ಪುನಾರಚನೆಗೆ ಹೈಕಮಾಂಡ್ ತಡೆ

Vishwanath S

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತ್ತಿಗೆವರೆಗೆ ಬಂದಿದ್ದ ಸಂಪುಟ ಸಂಕಷ್ಟ ಸದ್ಯಕ್ಕೆ ದೂರವಾಗಿದೆ.

ಸದ್ಯ ಸಿದ್ದರಾಮಯ್ಯ ಸಂಪುಟದಲ್ಲಿರುವ ಬಹುಪಾಲು ಮಂದಿಯನ್ನು ಪಕ್ಷ ಸಂಘಟನೆಗೆ ನೇಮಕ ಮಾಡುವ ಮಾಸ್ಟರ್ ಪ್ಲಾನ್ ಮಾಡುತ್ತಿರುವ ಹೈಕಮಾಂಡ್, ಪುನಾರಚನೆಯನ್ನು ಎಐಸಿಸಿ ಅಧಿವೇಶನದವರೆಗೆ ತಡೆಹಿಡಿದಿದೆ. ಸಂಪುಟ ಸೇರಲು ತುದಿಗಾಲಲ್ಲಿ ನಿಂತಿ ರುವವರಿಗೆ ಇದು ನಿರಾಸೆಯ ಸಂಗತಿಯಾದರೆ, ಸಿಎಂಗೆ ನಿರಾಳತೆ.

ಪಕ್ಷ ಗಟ್ಟಿಯಾಗಬೇಕು: ರಾಷ್ಟ್ರಮಟ್ಟದಲ್ಲಿ ತಳಹಿಡಿಯುತ್ತಿರುವ ಪಕ್ಷವನ್ನು ಮತ್ತೆ ಬಲಪಡಿಸಬೇಕು ಎಂಬುದು ಹೈಕಮಾಂಡ್ ನ ಅಭಿಲಾಷೆ. ಎಐಸಿಸಿ ಪುನಾರಚನೆಗೆ ವೇದಿಕೆ ಸಿದ್ಧವಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಎಐಸಿಸಿ ಅಧಿವೇಶನ ನಡೆಯಲಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪಂಚಾಂಗ ಭದ್ರ ಮಾಡಿ ಕೊಳ್ಳುವ ಬಗ್ಗೆಯೂ ಚಿಂತನೆ ನಡೆ ಯುತ್ತಿದ್ದು, ಸಂಪುಟದ ಬಹುಪಾಲು ಸದಸ್ಯರನ್ನು ಪಕ್ಷ ಸಂಘಟನೆಗೆ ನಿಯೋಜಿಸುವ ಮಾತುಗಳು ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ನಿರಾಳ: ಸಂಪುಟಕ್ಕೆ ಸೇರಲು ತುದಿಗಾಲಲ್ಲಿ ನಿಂತಿರುವ ಮಂದಿಯ ತಣಿಸಲು ಬಜೆಟ್ ಅಧಿವೇಶನ ನಂತರ ಸಂಪುಟ ಪುನಾರಚನೆ ಮಾಡಲೇಬೇಕಿತ್ತು. ಆದರೆ ಎಐಸಿಸಿ ಅಧಿವೇಶನ ಸಿದ್ದರಾಮಯ್ಯ ಅವರಿಗೆ ಇನ್ನೊಂದು ಬಾರಿ ಉಸಿರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಸಚಿವರಿಗೂ ನಿಗಮ-ಮಂಡಳಿ ಅಧ್ಯಕ್ಷರ ರೀತಿ ಅವ„ ನಿಗದಿ ಮಾಡುವ ಬಗ್ಗೆ ಆಪ್ತ ವಲಯದವರು ಮತ್ತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಎಐಸಿಸಿ ಮೂಲಗಳಿಂದ ತಿಳಿದು ಬಂದಿದೆ.

ಕೆಲವರು ಎಐಸಿಸಿಗೆ: ಇದೆಲ್ಲದಕ್ಕಿಂತ ಮುಖ್ಯವಾಗಿ ರಾಜ್ಯ ಸಚಿವ ಸಂಪುಟದಲ್ಲಿರುವ ಸಂಘಟನಾ ಚತುರರು ಮತ್ತು ಆರ್ಥಿಕ ಸಾಮರ್ಥ್ಯವಂತರನ್ನು ಈ ಬಾರಿ ಎಐಸಿಸಿಯ ವಿವಿಧ ಹುದ್ದೆಗಳಿಗೆ ನಿಯೋಜಿಸಲಿದೆ. ಘಟನಾ ಚತುರರು ಮತ್ತು ಆರ್ಥಿಕ ಸಾಮರ್ಥ್ಯವಂತರನ್ನು ಈ ಬಾರಿ ಎಐಸಿಸಿಯ ವಿವಿಧ ಹುದ್ದೆಗಳಿಗೆ ನಿಯೋಜಿಸಲಿದೆ. ಈಗ ರಾಜ್ಯದಿಂದ ಎಐಸಿಸಿ ಯನ್ನು ಪ್ರತಿನಿಧಿಸುತ್ತಿರುವವರ ಸಾಮರ್ಥ್ಯ ಹಲವು ರಾಜ್ಯಗಳ ಚುನಾ ವಣೆಯಲ್ಲಿ ಅನಾವರಣವಾಗಿದೆ. ರಾಜ್ಯಸಭಾ ಚಿಂತಕರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದು ಹೈಕಮಾಂಡ್ ಗೆ ಗೊತ್ತಾಗಿದೆ. ಹೀಗಾಗಿ ಹಾಲಿ ಸಚಿವರ ಪೈಕಿ ಕೆಲವರಿಗೆ ಎಐಸಿಸಿ ಸಂಘಟನೆ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆ ಒಲಿದು ಬರಲಿದೆ ಎಂದು ಕಾಂಗ್ರೆಸ್‍ನ
ಉನ್ನತ ಮೂಲಗಳು ತಿಳಿಸಿವೆ.

SCROLL FOR NEXT