ಬೆಂಗಳೂರು: `ಬಯಲುಸೀಮೆ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿನ ಅವಶ್ಯಕತೆ ತುಂಬಾ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ
ಮಂಡಿಸಲಿರುವ ಬಜೆಟ್‍ನಲ್ಲಿ ಇದಕ್ಕೆ ಪರಿಹಾರ ಸೂಚಿಸದಿದ್ದಲ್ಲಿ ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುವೆ' ಎಂದು ಶಾಸಕ ರಮೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಚಿತ್ರಕಲಾ ಪರಿಷತ್‍ನಲ್ಲಿ ಏರ್ಪಡಿಸಿದ್ದ `ಬರಿದಾಯಿತು ಬಯಲುಸೀಮೆ ಒಡಲು' ಛಾಯಾ ಚಿತ್ರ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇದ್ದು, ನನಗೂ ಸರ್ಕಾರದ ಬಳಿ ಕೇಳಿ ಕೇಳಿ ಸಾಕಾಗಿದೆ. ನಾನು ಜನರ ಬಳಿ ಇರಬೇಕು. ಜನಕ್ಕಿಂತ ಅಧಿಕಾರ ಶಾಶ್ವತ ಅಲ್ಲ. ಇದಾವುದಿಲ್ಲದಿದ್ದರೂ ಇರಬಲ್ಲೆ. ಆದರೆ, ನನ್ನೂರು ನನಗೆ ಮುಖ್ಯ. ಹೀಗಾಗಿ ಈ ಬಾರಿ ಅನ್ಯಾಯವಾದರೆ ಸಹಿಸಲ್ಲ. ಹೋರಾಟ ಮಾಡುವೆ ಎಂದು ಗುಡುಗಿದರು. ಹಾಗಾದರೆ ಈ ಬಾರಿ ಬಜೆಟ್‍ನಲ್ಲಿ ಮತ್ತೆ ಅನ್ಯಾಯ ಈ ಬಾರಿ ಬಜೆಟ್ ನಲ್ಲಿ ಮತ್ತೆ ಅನ್ಯಾಯವಾದರೆ ರಾಜಿನಾಮೆ ನೀಡುವುದು ನಿಶ್ಚಿತವೇ ಎಂಬ ಪತ್ರಕರ್ತರ ಪ್ರಶ್ನೆಗೆ, ನಿಮಗೆ ನನ್ನ ರಾಜಿನಾಮೆ.ಬೇಕಿದ್ದರೆ ಕೊಡುವೆ. ನನ್ನ ಮಾತಿಗೆ ನಾನು ಬದ್ಧನಿದ್ದೇನೆ, ನನ್ನ ನಿರ್ಣಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು.
ನನಗೆ ಬರುವ ೧೦ ದೂರವಾಣಿ ಕರೆಗಳಲ್ಲಿ 8 ನೀರಿಗೆ ಸಂಬಂಧಿಸಿದ್ದೇ ಆಗಿರುತ್ತದೆ. ಕೊನೆ ಪಕ್ಷ ಬೆಂಗಳೂರಿನ ಜನ ಪಾಯಿಖಾನೆಗೆ ಬಳಸುವ ನೀರನ್ನಾದರೂ ನಮಗೆ ಕೊಡಿ. ಅದನ್ನೇ ಶುಚಿಗೊಳಿಸಿ ಕೊಂಡು ಕುಡಿಯುತ್ತೇವೆ ಎಂದು ಕಳೆದ ಬಾರಿ ಅಧಿವೇಶನದಲ್ಲಿ ಕೇಳಿದರೂ ನೀರಿನ ಸಮಸ್ಯೆಯ ತೀವ್ರತೆ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ' ಎಂದುರಮೇಶ್ ಕುಮಾರ್ ಅವರು ಬೇಸರ ವ್ಯಕ್ತ ಪಡಿಸಿದರು.ನಮ್ಮವರೇ ಶತ್ರುಗಳು: ಈ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಶೇ. 60ರಷ್ಟು ಕುಸಿತ ಕಂಡಿದೆ. ಸಮರ್ಪಕ ನೀರು, ಮೇವು ಇಲ್ಲದಿರುವುದೇ ಇದಕ್ಕೆ ಕಾರಣ.
ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿ ದ್ದಾರೆ. ಜೀವನ ನಿರ್ವಹಣೆಗೆ ಬೆಂಗಳೂರಿನಂಥ ಹೊರ ಊರುಗಲ್ಲಿರುವ ಮಕ್ಕಳು ಹಣ ಕಳುಹಿಸುತ್ತಿದ್ದಾರೆ. ಆದರೆ, ಅವರಿಂದ ನೀರು ಕಳುಹಿಸಲು ಸಾಧ್ಯವೇ? ಈ ಕೆಲಸವನ್ನು ರಾಜ್ಯಸರ್ಕಾರವೇ ಮಾಡಬೇಕು. ಎತ್ತಿನ ಹೊಳೆ ಯೋ ಜನೆ ಅನುಷ್ಠಾನವಾದರೆ, ಭಾಗಶಃ ಸಮಸ್ಯೆ ಪರಿಹಾರವಾ
ಗುತ್ತದೆ. ನಮ್ಮ ರಾಜ್ಯದ ಜನರೇ, ನಮ್ಮವರೇ ನಮಗೆ ಶತ್ರುಗಳಂತೆ ಮಾತನಾಡುತ್ತಿದ್ದಾರೆ. ಈ ಬಾರಿ ಮಳೆಯಾಗದಿದ್ದರೆ, ಆ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಅವರು ಕಳವಳ ವ್ಯಕ್ತಪಡಿಸಿದರು. `ಬರಿದಾಯಿತು ಬಯಲುಸೀಮೆ ಒಡಲು' ಛಾಯಾಚಿತ್ರವನ್ನೊಳಗೊಂಡ ಕಿರುಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಫ್ಲೋ ರೈಡ್‍ಯುಕ್ತ ನೀರು ಸೇವನೆಯಿಂದ ಸಾಕಷ್ಟು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಇವರಿಗೆ ಶುದಟಛಿ ಕುಡಿಯುವ ನೀರು ಒದಗಿಸುವುದೇ ನಮ್ಮ ಗುರಿ. ಯಾವ ಯಾವ ಮೂಲಗಳಿಂದ ಇಲ್ಲಿನ ಜನತೆಗೆ ನೀರು ಒದಗಿಸಲು ಸಾಧ್ಯವೋ ಆ
ಎಲ್ಲ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿದೆ ಎಂದರು.ಯೋ ಜನೆ ಮುಂದುವರಿಸಿ: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಸಕಲೇಶಪುರದ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂಬುದು ನಮಗೆ ಚೆನ್ನಾಗಿ ಅರಿವಿದೆ. ಇಲ್ಲಿ 1600, 1800 ಅಡಿ ಕೊರೆದರೂ ನೀರು ಸಿಗುವುದು ಕಷ್ಟ. ಈ ಬಗ್ಗೆ ಆಗಿನ ನಮ್ಮ ಬಿಜೆಪಿ ಸರ್ಕಾರ ಸಹ ಶ್ರಮಿಸಿತ್ತು. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಿದ್ದತೆ ನಡೆಸಿದ್ದೆವು. ಈ ಸರ್ಕಾರ ಅದನ್ನು ಮುಂದುವರಿಸಿ ಕೊಂಡು ಹೋಗಬೇಕಷ್ಟೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.