ಬೆಂಗಳೂರು: ಲೋಕಾಯುಕ್ತರ ಪದಚ್ಯುತಿಗೆ ರಾಜ್ಯ ವಿಧಾನ ಮಂಡಲದಲ್ಲಿ ಮಂಗಳವಾರ ಬಿಜೆಪಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ.
ಸೋಮವಾರ ನಡೆದ ಕಲಾಪ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ವಿಧಾನ ಪರಿಷತ್‍ನಲ್ಲಿ ಮೊದಲು ನಿರ್ಣಯ ಮಂಡಿಸಲು ನಿರ್ಧರಿಸಲಾಗಿದೆ ಎಂಬ ವಿಚಾರ ಬಿಜೆಪಿ ಮುಖಂಡರು ಸ್ಪೀಕರ್ ಕಾಗೋಡು ತಿಮ್ಮಪ್ಪ ಗಮನಕ್ಕೆ ತಂದಿದ್ದು, ಜೆಡಿಎಸ್‍ನಎಲ್ಲಸದಸ್ಯರಸಹಿಸಂಗ್ರಹವಾದ ಬಳಿಕ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವುದಾಗಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಭೆಯಲ್ಲಿ ಅಭಿಪ್ರಾಯ ತಿಳಿಸಿದರು.
ಆದರೆ ಸೂಕ್ತ ದಾಖಲೆಗಳ ಜತೆಗೆ ನಿರ್ಣಯ ಮಂಡಿಸಿ. ಕೇವಲ ಸಹಿ ಹಾಕಿದ ಪತ್ರ ನೀಡಿದರೆ ಅದರಿಂದ ಪ್ರಯೋಜನವಾಗುವುದಿಲ್ಲ ಎಂಬ ಸಲಹೆಯನ್ನು ಸ್ಪೀಕರ್ ಈ ಸಂದರ್ಭದಲ್ಲಿ ನೀಡಿದರು. ಆದರೆ ಮೌಢ್ಯ ನಿಷೇಧ ವಿಧೇಯಕ ಈ ಅಧಿವೇಶನದಲ್ಲಿ ಚರ್ಚೆಗೆ ಬರುವುದಿಲ್ಲ. ಈ ಬಗ್ಗೆಮತ್ತೊಂದುಕರಡುರಚಿಸಲು ಕಾನೂನು ಹಿನ್ನೆಲೆಯುಳ್ಳ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ರಮೇಶ್ ಕುಮಾರ್ ಸಮಿತಿ ನೀಡಿದ ವರದಿ ಆಧರಿಸಿಪಂಚಾಯಿತ್ ರಾಜ್ ಸುಧಾರಣಾ ವಿಧೇಯಕ ಮಾತ್ರ ಮಂಡನೆಯಾಗಲಿದೆ.