ವಿಧಾನಮಂಡಲ ಅಧಿವೇಶನ 
ರಾಜಕೀಯ

ನಡಹಳ್ಳಿ ವೀರಾವೇಶ

ಇಷ್ಟೂ ದಿನ ಪ್ರತ್ಯೇಕ ರಾಜ್ಯದ ಮಾತನಾಡಿ ಸರ್ಕಾರಕ್ಕೆ ಮುಜುಗರ ತರುತ್ತಿದ್ದ ಕಾಂಗ್ರೆಸ್ ಶಾಸಕ ಎ.ಎಸ್.ನಡಹಳ್ಳಿ ಶುಕ್ರವಾರ ಸರ್ಕಾರದ ವೈಫಲ್ಯಗಳ ವಿರುದ್ಧ ಸದನದಲ್ಲಿ ಬಂಡಾಯದ ಭಾಷಣ ಮಾಡಿ ಗಮನ ಸೆಳೆದರು...

ವಿಧಾನಸಭೆ: ಇಷ್ಟೂ ದಿನ ಪ್ರತ್ಯೇಕ ರಾಜ್ಯದ ಮಾತನಾಡಿ ಸರ್ಕಾರಕ್ಕೆ ಮುಜುಗರ ತರುತ್ತಿದ್ದ ಕಾಂಗ್ರೆಸ್ ಶಾಸಕ ಎ.ಎಸ್.ನಡಹಳ್ಳಿ ಶುಕ್ರವಾರ ಸರ್ಕಾರದ ವೈಫಲ್ಯಗಳ ವಿರುದ್ಧ ಸದನದಲ್ಲಿ ಬಂಡಾಯದ ಭಾಷಣ ಮಾಡಿ ಗಮನ ಸೆಳೆದರು.

ಬರ ಪರಿಸ್ಥಿತಿ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಪ್ರತಿಪಕ್ಷ ಸದಸ್ಯರನ್ನೇ ನಾಚಿಸುವಂತೆ ಸರ್ಕಾರವನ್ನು ಮಾತುಗಳ ಮೂಲಕ ಟೀಕಿಸಿದರು. ಹಾಗೆಯೇ ಪ್ರತಿಪಕ್ಷ ಬಿಜೆಪಿಯನ್ನು ಸಮರ್ಥಿಸಿದರು. ಅದರ ಫಲವಾಗಿ ಬಿಜೆಪಿ ಸದಸ್ಯರಿಂದ ಶ್ಲಾಘನೆ, ಅಭಿನಂದನೆಗಳನ್ನೂ ಪಡೆದು ಸದನ ಶೂರ ಎನಿಸಿಕೊಂಡರು.

ಶುಕ್ರವಾರದ ಕಲಾಪದಲ್ಲಿ ಹೇಳಿಕೊಳ್ಳುವ ಬಿಸಿ ಚರ್ಚಿ ನಡೆಯದೆ ಪೇಲವವಾಗಿತ್ತು. ಅಂಥ ಸಂದರ್ಭದಲ್ಲಿ ಬರ ಮೇಲಿನ ಚರ್ಚೆ ಆರಂಭಿಸಿದ ನಡಹಳ್ಳಿ, ರಾಜ್ಯದಲ್ಲಿ ಬರ ಆವರಿಸಲು ಯಾರು ಕಾರಣ. ರೈತರ ಆತ್ಮಹತ್ಯೆಗೆ ಯಾರು ಕಾರಣ ಎಂಬ ಪ್ರಶ್ನೆಗಳನ್ನು ಹಾಕಿದರು. ಅದಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳೇ ಕಾರಣ ಎಂದು ಉತ್ತರವನ್ನೇ ತಾವೇ ನೀಡುತ್ತಾ, ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಟ್ಟರು. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲಾರಂಭಿಸುತ್ತಿದ್ದಂತೆ ಇಡೀ ಸದನವೇ ನೊಂದ ರೈತರ ಮನೆಗಳಿಗೆ ಪ್ರಯತ್ನವನ್ನೇ ಮಾಡಲಿಲ್ಲ. ಬದಲಾಗಿ ಮೃತ ರೈತ ಕುಟುಂಬಕ್ಕೆ ನೀಡುವ ಪರಿಹಾರದ ಹಣ ಉಳಿಸಲು ರೈತರು ಯಾವ ರೀತಿ ಸತ್ತಿದ್ದಾರೆ ಎಂದು ಮಾರುವೇಷದ ತನಿಖೆ ಆರಂಭಿಸಿತು.

ಇದಕ್ಕಿಂತ ಅವಮಾನ ಬೇಕೇ ಎಂದು ಜರಿದರು. ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ರೈತರ ಸಾಲ ಮನ್ನಾ ಮಾಡಬೇಕು. ರೈತರ ಆತ್ಮಹತ್ಯೆ ತಡೆಗೆ, ಪರಿಹಾರ ಕಂಡು ಹಿಡಿಯುವುದಕ್ಕೆ ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಬಾರದು. ನನ್ನ ವಿರುದ್ಧ ಕಾಂಗ್ರೆಸ್ ಯಾವುದೇ ಕ್ರಮಕೈಗೊಳ್ಳಲಿ. ನಾನು ಶಾಸಕನಾಗಿ ಇರುವವರೆಗೂ ರೈತರ ಪರವಾಗಿ ಮಾತನಾಡುತ್ತೇನೆ ಎಂದರು. ಆಗ ಬಿಜೆಪಿ ಸದಸ್ಯರು ನಡಹಳ್ಳಿ ಭಾಷಣವನ್ನು ಶ್ಲಾಘಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!