ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ 
ರಾಜಕೀಯ

ರಾಷ್ಟ್ರೀಯ ಪಕ್ಷಗಳಿಗೆ ನನ್ನ ಶಕ್ತಿ ಏನು ಎಂದು ತೋರಿಸುತ್ತೇನೆ: ದೇವೇಗೌಡ

ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳಿಗೆ ದೇವೇಗೌಡ ಏನೆಂದು ತೋರಿಸ್ತೀನಿ. ಎರಡೂ ಪಕ್ಷಕ್ಕೆ ನನ್ನ ಯೋಗ್ಯತೆ ಹಾಗೂ ಸಾಮರ್ಥ್ಯ ಏನು ಎಂದು ತೋರಿಸುವ ಶಕ್ತಿ...

ಬೆಂಗಳೂರು: ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳಿಗೆ ದೇವೇಗೌಡ ಏನೆಂದು ತೋರಿಸ್ತೀನಿ. ಎರಡೂ ಪಕ್ಷಕ್ಕೆ ನನ್ನ ಯೋಗ್ಯತೆ ಹಾಗೂ ಸಾಮರ್ಥ್ಯ ಏನು ಎಂದು ತೋರಿಸುವ ಶಕ್ತಿ ನನ್ನಲ್ಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸವಾಲು ಹಾಕಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕ್ರಮಗಳಿಗೆ ಅಪಾರ ಜನ ಸೇರುತ್ತಾರೆ. ಆದರೆ ಅವುಗಳು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಕೆಲವು ಜಿಲ್ಲೆ, ತಾಲೂಕುಗಳಲ್ಲಿ ಜೆಡಿಎಸ್ ಘಟಕಗಳು ನಿಷ್ಕ್ರಿಯವಾಗಿದೆ. ಪಕ್ಷ ಉಳಿಸಲಿಕ್ಕಾಗಿ ನಿಷ್ಕ್ರಿಯ ಘಟಕಗಳನ್ನು ಮಾರ್ಪಾಡು ಮಾಡುತ್ತೇನೆ ಎಂದರು.

ಚುನಾವಣೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಈ ತಿಂಗಳೊಳಗೆ ಜಿ.ಪಂ, ತಾ.ಪಂ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ದೇವೇಗೌಡರು ಹೇಳಿದರು.

ಇನ್ನು ಇದಕ್ಕೂ ಮೊದಲು ಜೆಡಿಎಸ್ ನ ಮಾಗಡಿ ಶಾಸಕ ತಮಗೆ ಮೊದಲ ಸಾಲಿನಲ್ಲಿ ಸೀಟು ಸಿಗಲಿಲ್ಲವೆಂದು ಅಸಮಾಧಾನ ವ್ಯಕ್ತ ಪಡಿಸಿದರು. ಬಾಲಕೃಷ್ಣರನ್ನು ಸಮಾಧಾನ ಪಡಿಸಲು ಜೆಡಿಎಸ್ ನ ಹಿರಿಯ ಮುಖಂಡರು ಯತ್ನಿಸಿದರೂ, ಅವರು ಸಭೆಯಿಂದ ಹೊರ ನಡೆದ ಘಟನೆ ಕೂಡ ನಡೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಕೋವಿಡ್ ಅಬ್ಬರ: ಆಂಧ್ರದಲ್ಲಿ ನಾಲ್ವರು ಬಲಿ; ರಾಜ್ಯದ ಗಡಿಭಾಗದಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ!

ನವೀಕೃತಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ

2022 ಡ್ರಗ್ಸ್ ಪ್ರಕರಣ: ನಟ ಸಿದ್ಧಾಂತ್ ಕಪೂರ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್

Namma Metro: ಮೆಟ್ರೋ ಪ್ರಯಾಣಿಕರೇ ಹುಷಾರ್; ಹುಚ್ಚಾಟ ಆಡಿದ್ರೆ ಬೀಳುತ್ತೆ 5 ರಿಂದ 25 ಸಾವಿರ ರೂ.ವರೆಗೆ ದಂಡ!

FIFA World Cup final 2026: ಈ ಬಾರಿಯ ವಿಜೇತರಿಗೆ ಸಿಗಲಿದೆ ಅಮೆರಿಕ ರೀತಿಯ ಚಾಂಪಿಯನ್ ಶಿಪ್ ಉಂಗುರ!