ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ (ಸಂಗ್ರಹ ಚಿತ್ರ) 
ರಾಜಕೀಯ

ನಡೆಯದ ಕೃಷ್ಣ ಸೋನಿಯಾ ಭೇಟಿ

ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‍ನಲ್ಲಿ ಭಾರಿ ಬದಲಾವಣೆ ತರಲಿದೆ ಎಂದೇ ಭಾವಿಸಲಾಗಿದ್ದ ಮಾಜಿ ವಿದೇಶಾಂಗ ಸಚಿವ ಎಸ್. ಎಂ. ಕಷ್ಣ ಅವರ ದೆಹಲಿ ಭೇಟಿಯ ಮೊದಲ ದಿನ ಯಾವ ಅಚ್ಚರಿಯೂ ನಡೆಯಲಿಲ್ಲ...

ನವದೆಹಲಿ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‍ನಲ್ಲಿ ಭಾರಿ ಬದಲಾವಣೆ ತರಲಿದೆ ಎಂದೇ ಭಾವಿಸಲಾಗಿದ್ದ ಮಾಜಿ ವಿದೇಶಾಂಗ ಸಚಿವ ಎಸ್. ಎಂ. ಕಷ್ಣ ಅವರ ದೆಹಲಿ ಭೇಟಿಯ ಮೊದಲ  ದಿನ ಯಾವ ಅಚ್ಚರಿಯೂ ನಡೆಯಲಿಲ್ಲ.

ಮಧ್ಯಾಹ್ನದ ವೇಳೆ ದೆಹಲಿಗೆ ಆಗಮಿಸಿದ ಎಸ್.ಎಂ.ಕೃಷ್ಣ ಅವರು ಖಾಸಗಿ ಹೋಟೆಲ್‍ಗೆ ತೆರಳಿದರು. ತಡರಾತ್ರಿವರೆಗೂ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನಾಗಲೀ, ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರನ್ನಾಗಲೀ, ಕರ್ನಾಟಕ ಉಸ್ತುವಾರಿ ದಿಗ್ವಿಜಯ್  ಸಿಂಗ್ ಅವರನ್ನಾಗಲೀ ಭೇಟಿ ಮಾಡಲಿಲ್ಲ. ಶುಕ್ರವಾರ ಅವರು ದಿಗ್ವಿಜಯ್  ಸಿಂಗ್ ಅವರನ್ನು ಭೇಟಿ ಮಾಡುವ  ನಿರೀಕ್ಷೆ ಇದೆ. ಆದರೆ, ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿ ಅವರನ್ನು ಯಾವಾಗ ಭೇಟಿ ಮಾಡುತ್ತಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭೇಟಿಗೆ ಮಹತ್ವ:
ಸೆ.24 ರಂದು ಸೋನಿಯಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಬಿಎಂಪಿ ಚುನಾವಣೆಗಳ ವಿದ್ಯಮಾನಗಳ ಬಗ್ಗೆ ವಿವರಿಸಿದ್ದರು.

ಪತ್ರಕರ್ತರಿಗೆ ಅಚ್ಚರಿ: ಜನಪಥ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿ ಮಾಜಿ ವಿದೇಶಾಂಗ ಸಚಿವ ಎಸ್. ಎಂ.ಕೃಷ್ಣ ಅವರಿಗಾಗಿ ಕಾಯುತ್ತಿದ್ದ ಪತ್ರಕರ್ತರಿಗೆ ಅಚ್ಚರಿಯೋ  ಅಚ್ಚರಿ! ಏಕೆಂದರೆ, ಸೋನಿಯಾಗಾಂಧಿ ಅವರ ನಿವಾಸದಿಂದ ಹೊರ ಬಂದಿದ್ದು ಕೃಷ್ಣ ಅಲ್ಲ, ಚಿತ್ರನಟಿ, ಮಾಜಿ ಸಂಸದೆ ರಮ್ಯಾ!! ಎಸ್.ಎಂ. ಕಷ್ಣ ಅವರು ದೆಹಲಿಗೆ ಬರುವ ಮುನ್ನವೇ ರಾಜಧಾನಿಗೆ ಆಗಮಿಸಿದ್ದ ರಮ್ಯಾ ಸೀದಾ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಚರ್ಚಿಸಿದ್ದಾರೆ. ಚರ್ಚೆ ವೇಳೆ ಮಂಡ್ಯದಲ್ಲಿ ರಾಹುಲ್ ಭೇಟಿ ಮತ್ತು ನಂತರದ ವಿದ್ಯಮಾನಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಭೇಟಿ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಲು ನಿರಾಕರಿಸಿದ್ದಾರೆ. ನಂತರ  ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!