ಮುಲಾಯಂ ಸಿಂಗ್ 
ರಾಜಕೀಯ

ಮೋದಿ ಪ್ರಶಂಸೆಗೆ ಧನ್ಯವಾದ ತಿಳಿಸಿದ ಮುಲಾಯಂ

ಸಂಸತ್ ಅಧಿವೇಶನದ ವೇಳೆ ಗದ್ದಲ ಉಂಟುಮಾಡಿದ್ದ ಕಾಂಗ್ರೆಸ್ ಗೆ ಬೆಂಬಲಿಸದ ಸಮಾಜವಾದಿ ಪಕ್ಷದ ಕ್ರಮಕ್ಕೆ ಪ್ರಧಾನಿ ಮೋದಿಯಿಂದ ವ್ಯಕ್ತವಾದ ಪ್ರಶಂಸೆಯನ್ನು ಮುಲಾಯಂ ಸಿಂಗ್ ಸ್ವಾಗತಿಸಿದ್ದಾರೆ.

ಲಖನೌ: ಸಂಸತ್ ಅಧಿವೇಶನದ ವೇಳೆ ಗದ್ದಲ ಉಂಟುಮಾಡಿದ್ದ ಕಾಂಗ್ರೆಸ್ ಗೆ ಬೆಂಬಲಿಸದ ಸಮಾಜವಾದಿ ಪಕ್ಷದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ವ್ಯಕ್ತವಾದ ಪ್ರಶಂಸೆಯನ್ನು ಮುಲಾಯಂ ಸಿಂಗ್ ಸ್ವಾಗತಿಸಿದ್ದಾರೆ.

ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿರುವುದು ಗೌರವ ಸೂಚಕ ಎಂದು ಭಾವಿಸುತ್ತೇನೆ. ಆದರೆ ಏರು ಧ್ವನಿಯಲ್ಲಿ ಸುಳ್ಳು ಹೇಳಿ ಜನತೆಗೆ ಮೋಸ ಮಾಡುತ್ತಿರುವುದು ಸರಿಯಲ್ಲ ಎಂದು ಮುಲಾಯಂ ಸಿಂಗ್ ಯಾದವ್ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್, ಪ್ರಜಾಪ್ರಭುತ್ವವವನ್ನು ಉಳಿಸಲು ಸಮಾಜವಾದಿ ಪಕ್ಷ ಬೆಂಬಲಿಸಿದ್ದಕ್ಕೆ ಮೋದಿ ಪ್ರಶಂಸಿಸಿದ್ದಾರೆ. ಆದರೆ ಮೋದಿ ಸುಳ್ಳು ಹೇಳಿದರೂ ಸಹಿಸುತ್ತೇವೆ ಎಂದು ಇದರ ಅರ್ಥವಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಈ ವರೆಗೂ ಅದನ್ನು ಈಡೇರಿಸಿಲ್ಲ. ಜನರು ತಮ್ಮ ಅಭಿವೃದ್ಧಿ ಬಗ್ಗೆ ಯೋಚಿಸದ ಜನಪ್ರತಿನಿಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮುಲಾಯಂ ಸಿಂಗ್ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್