ಎಚ್.ಡಿ ಕುಮಾರಸ್ವಾಮಿ ಮತ್ತು ವಿ.ಎಸ್ ಉಗ್ರಪ್ಪ 
ರಾಜಕೀಯ

ದುಬಾರಿ ವಾಚ್, ಕಾರುಗಳ ಸರದಾರ ಎಚ್ .ಡಿ ಕುಮಾರಸ್ವಾಮಿ: ವಿ.ಎಸ್ ಉಗ್ರಪ್ಪ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಮನೆಯಲ್ಲಿ ಕನಿಷ್ಠ 50 ದುಬಾರಿ ವಾಚ್ ಗಳಿವೆ. 8 ದುಬಾರಿ ಮೊತ್ತದ ಕಾರುಗಳಿವೆ, ಅದರಲ್ಲಿ ಇನ್ನೂ ಎರಡು ,...

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಮನೆಯಲ್ಲಿ ಕನಿಷ್ಠ 50 ದುಬಾರಿ ವಾಚ್ ಗಳಿವೆ. 8 ದುಬಾರಿ ಮೊತ್ತದ ಕಾರುಗಳಿವೆ, ಅದರಲ್ಲಿ ಇನ್ನೂ ಎರಡು ಕಾರುಗಳಿಗೆ ರಿಜಿಸ್ಟ್ರೇಷನ್ ಕೂಡ ಆಗಿಲ್ಲ ಎಂದು ಎಂಎಲ್ ಸಿ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರ ಸ್ವಾಮಿ ಮನೆಯಲ್ಲಿ ದುಬಾರಿ ಬೈಕ್ ಇದೆ. ಸುಮಾರು. ಜೊತೆಗೆ 8 ದುಬಾರಿ ಕಾರುಗಳಿಗೆ ಅವುಗಳಿಗೆ ನಿನ್ನೆಯಿಂದ ಕವರ್ ಹಾಕಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿ ಅವರು ದುಬೈ ನಲ್ಲಿ 6 ಕೋಟಿ ಬೆಲೆ ಬಾಳುವ ಕಾರು ಹಾಗೂ ಒಂದೂವರೆ ಕೋಟಿ ಮೌಲ್ಯದ ವಾಚ್ ಉಡುಗೊರೆಯಾಗಿ ಪಡೆದಿದ್ದರು. ಅವುಗಳನ್ನು ನೀಡಿದ್ದು ಯಾರು, ಅದಕ್ಕೆ ಪ್ರತಿಯಾಗಿ ಎಚ್ ಡಿ ಕೆ ಏನು ಕೆಲಸ ಮಾಡಿಕೊಟ್ಟಿದ್ದಾರೆ, ಆದಾಯ ತೆರಿಗೆ
ಕಟ್ಟುವಾಗ ಈ ಲೆಕ್ಕ ತೋರಿಸಿದ್ದಾರಾ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.


ಕುಮಾರಸ್ವಾಮಿ ಅವರ ಬಳಿಯಿರುವ ಕಾರುಗಳ ಪಟ್ಟಿ
ನಿಖಿಲ್ ಗೌಡ ಬಳಿ 8 ಕೋಟಿ ರೂ. ಬೆಲೆ ಬಾಳುವ ಲ್ಯಾಂಬರ್ ಗಿನಿ ಕಾರು
ಕುಮಾರಸ್ವಾಮಿ ಬಳಿ 3 ಕೋಟಿಯ ರೇಂಜ್ ರೋವರ್ ಕಾರು
ಕುಮಾರಸ್ವಾಮಿ ಬಳಿ 1.2ಕೋಟಿಯ ಇನ್ಫಿನಿಟ್ ಕಾರು
ಕುಮಾರಸ್ವಾಮಿ ಗಿಫ್ಟ್ ಆಗಿ ಪಡೆದ ಹಮ್ಮರ್ , ಫೋರ್ಶ್ ಕಾರು ಇದೆ 
ಕುಮಾರಸ್ವಾಮಿ ಬಳಿ   ವಜ್ರ ಖಚಿತ ಫ್ರಾಂಕ್ ಮುಲ್ಲರ್, ರಾಡೋ ವಾಚ್ ಗಳಿವೆ
.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT