ಹುಬ್ಬಳ್ಳಿ: ತಮ್ಮ ಸ್ನೇಹಿತ ಎಂಬ ಕಾರಣಕ್ಕೆ ನ್ಯಾ. ಎಸ್ ಆರ್ ನಾಯಕ್ ಅವರನ್ನು ಲೋಕಾಯುಕ್ತ ಸ್ಥಾನಕ್ಕೆ ನೇಮಿಸಲು ಸಿಎಂ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮತನಾಡಿದ ಅವರು, ನ್ಯಾ.ಎಸ್ ಆರ್ ನಾಯಕ್ ಹಾಗೂ ಸಿಎಂ ಸಿದ್ದರಾಮಯ್ಯ ಸ್ನೇಹಿತರು. ಹಾಗಾಗಿ ಅವರನ್ನೇ ನೇಮಿಸಲು ಮುಂದಾಗಿದ್ದು, ಲೋಕಾಸಲಹಾ ಸಮಿತಿ ಸಲಹೆ ಯನ್ನು ಸಿಎಂ ಗಂಭೀರವಾಗಿ ಪರಿಗಣಿಸಿಲ್ಲ. ಸಮಿತಿ ನ್ಯಾ. ವಿಕ್ರಮಜಿತ್ ಸೇನ್ ನೇಮಕಕ್ಕೆ ಸೂಚಿಸಿತ್ತು. ಆದರೆ, ವಿನಾಕಾರಣ ಗೊಂದಲ ಸೃಷ್ಟಿಸಿ ಅವರು ಹಿಂದೆ ಸರಿಯುವಂತೆ ಮಾಡಲಾಗಿದೆ ಎಂದರು