ಬಿಜೆಪಿ ಶಾಸಕರುಗಳಾದ ಸುರೇಶ್ ಕುಮಾರ್, ಅಶೋಕ್ ಮತ್ತು ವಿಜಯ್ ಕುಮಾರ್ ರಿಂದ ವಿಧಾನ ಸಭೆಯಲ್ಲಿ ರಾತ್ರಿ ಊಟ ಸೇವನೆ 
ರಾಜಕೀಯ

ವಿಪಕ್ಷಗಳ ಅಹೋರಾತ್ರಿ ಧರಣಿ: ಸರಳ ಸಸ್ಯಾಹಾರ ಊಟ, ಮಲಗಲು ಹಾಸಿಗೆಗಳಾದ ಸೋಫಾ

ಧರಣಿ ನಡೆಸುವ ಶಾಸಕರಿಗೆ ಊಟ ಹಾಗೂ ಮಲಗಲು ಅನುಕೂಲ ಮಾಡಿಕೊಡುವಂತೆ ಸ್ಪೀಕರ್ ಕೆ.ಬಿ ಕೋಳಿವಾಡ್ ವಿಧಾನಸಭೆ ಕಾರ್ಯದರ್ಶಿಗೆ ..

ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಕುರಿತು ನ್ಯಾಯಾಂಗ  ವಿಚಾರಣೆ ನಡೆಸಲು ಸಿದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು. ಆದರೆ, ಅದಕ್ಕೆ ಒಪ್ಪದ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು, ಸಿಬಿಐ ತನಿಖೆಗೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ತಿರಸ್ಕರಿಸಿದ ವಿರೋಧಪಕ್ಷದ ಸದಸ್ಯರು, ಜಾರ್ಜ್‌ ಅವರನ್ನು ಸಂಪುಟದಿಂದ ತಕ್ಷಣವೇ ವಜಾ ಮಾಡಿ, ಎಫ್‌ಐಆರ್‌ ದಾಖಲಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದು ರಾತ್ರಿ ಇಡೀ ವಿಧಾನಸೌಧದಲ್ಲಿ ಧರಣಿ ನಡೆಸಿದರು.

ಜಗದೀಶ್ ಶೆಟ್ಟರ್ ಮತ್ತು ಎಚ್ ಡಿ ಕುಮಾರ ಸ್ವಾಮಿ ಮುಂದಿನ ಹೋರಾಟದ ಬಗ್ಗೆ ರೂಪು ರೇಷೆಗಳನ್ನು ಸಿದ್ದಪಡಿಸುತ್ತಿದ್ದರೇ ಎರಡು ಪಕ್ಷದ ಶಾಸಕರು ಆಡಳಿತ ಪಕ್ಷದ ವಿರುದ್ಧ ಹೇಗೆ ದಾಳಿ ನಡೆಸಬೇಕು ಎಂಬ ಚರ್ಚೆಯಲ್ಲಿ ನಿರತರಾಗಿದ್ದರು.

ಧರಣಿ ನಡೆಸುವ ಶಾಸಕರಿಗೆ ಊಟ ಹಾಗೂ ಮಲಗಲು ಅನುಕೂಲ ಮಾಡಿಕೊಡುವಂತೆ ಸ್ಪೀಕರ್ ಕೆ.ಬಿ ಕೋಳಿವಾಡ್ ವಿಧಾನಸಭೆ ಕಾರ್ಯದರ್ಶಿಗೆ ಸೂಚಿಸಿದ್ದರು.

ಸಂಜೆ ವಿಧಾನಸಭೆಯ ಮೊಗಸಾಲೆಯಲ್ಲಿ  ಬಿಸಿ ಬಿಸಿ ಕಾಫಿ, ಗರಿಗರಿ ಮಂಡಕ್ಕಿ ಸೇವಿಸಿದ ನಾಯಕರು ರಾತ್ರಿ ಚಪಾತಿ, ಪಲ್ಯ, ಅನ್ನ ಸಾರು ತಿಂದರು.

ಸಕ್ಕರೆ ಕಾಯಿಲೆ ಇರುವ ಕೆಲ ಶಾಸಕರಿಗೆ ಮನೆಯಿಂದ ಅವಶ್ಯಕವಿರುವ ಔಷಧಿಗಳನ್ನು ಕಳುಹಿಸಲಾಗಿತ್ತು, ಮಲಗಲು ವಿಧಾನಸಭೆ ಕಾರ್ಯದರ್ಶಿ ಬೆಡ್ ಗಳ ವ್ಯವಸ್ಥೆ ಮಾಡಿದ್ದರು. ಇನ್ನೂ ಕೆಲ ನಾಯಕರು ಸೋಪಾಗಳನ್ನೇ ಬೆಡ್ ಗಳನ್ನಾಗಿ ಮಾಡಿಕೊಂಡು ಮಲಗಿದ್ದರು.

ಕೆಸ ಸದಸ್ಯರು ಗುರುವಾರ ಬೆಳಗ್ಗೆ, ದೈನಂದಿನ ಕೆಲಸಗಳನ್ನು ಮುಗಿಸಿಕೊಂಡು ಪ್ರೆಶ್ ಅಪ್ ಆಗಿ ಬರಲು ಮನೆಗೆ ತೆರಳಿ ಮತ್ತೆ ವಾಪಸ್ ಬಂದು ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ನಮ್ಮ ಧರಣಿ ಮುಂದುವರಿಯಲಿದ್ದು, ಜುಲೈ 30 ಅದರೆ ಅಧಿವೇಶನ ಮುಗಿದ ಬಳಿಕ, ಇಬ್ಬರು ಡಿವೈಎಸ್ ಪಿಗಳ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಜೆಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT