ಅಂಬರೀಷ್ 
ರಾಜಕೀಯ

ಅಂಬರೀಷ್ ಗಾಗಿ ನಾನು ಸಚಿವ ಸ್ಥಾನ ತ್ಯಜಿಸಲು ಸಿದ್ದ

ನಟ ಅಂಬರೀಶ್‌ಗೆ ಸಚಿವ ಸ್ಥಾನ ನೀಡುವುದಾದರೆ ನಾನು ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ದ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ..

ಚಿತ್ರದುರ್ಗ: ನಟ ಅಂಬರೀಶ್‌ಗೆ ಸಚಿವ ಸ್ಥಾನ ನೀಡುವುದಾದರೆ ನಾನು ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ದ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.

ಅಂಬರೀಷ್ ನಾನು ಒಳ್ಳೆಯ ಸ್ನೇಹಿತರು. ಅವರಿಗೆ ಉತ್ತಮ ಸ್ಥಾನಮಾನ ನೀಡಬೇಕು. ಅಗತ್ಯವಿದ್ದರೆ ನನ್ನ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ ಎಂದು ಎಂದು ಅವರು ಹೇಳಿದ್ದಾರೆ.

ಮಾಜಿ ಸಚಿವ ಅಂಬರೀಶ್ ಹಿರಿಯ ನಾಯಕರಾಗಿದ್ದರಿಂದ ಅವರಿಗೆ ಉತ್ತಮ ಸ್ಥಾನ ದೊರೆಯಬೇಕು. ಅವರಿಗಾಗಿ ಸಚಿವ ಸ್ಥಾನ ಬಿಟ್ಟುಕೊಡಲು ನಾನು ಸಿದ್ದವಾಗಿದ್ದೇನೆ ಎಂದು ಘೋಷಿಸಿದ್ದಾರೆ. ಅಂಬರೀಶ್‌ಗೆ ಅವರ ಘನತೆ ಗೌರವಕ್ಕೆ ತಕ್ಕಂತೆ ಯಾವುದಾದರೂ ಉತ್ತಮ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಮುರುಘಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಚಿವ ಮಲ್ಲಿಕಾರ್ಜುನ್, ಎಲ್ಲರಲ್ಲೂ ಶರಣರನ್ನು ಕಾಣಬೇಕಾಗಿದೆ. ಶ್ರೀಗಳ ಆಶೀರ್ವಾದ ದೊರೆತಿದ್ದರಿಂದ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT