ಮೈಸೂರು: ಮುಂಬರುವ ವಿಧಾನ ಸಬೆ ಚುನಾವಣೆಯಲ್ಲಿ ರಾಜ್ಯಜ ಜನತೆ ನನಗೆ ಆಶೀರ್ವದಿಸದಿದ್ದರೇ ರಾಜಕೀಯದಿಂದ ನಿವೃತ್ತಿ ಹೊಂದಿ ಚಿತ್ರರಂಗದಲ್ಲಿ ಮುಂದುವರಿಯುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಪ್ರವೇಶ ಮಾಡದಿದ್ದರೇ ಕನ್ನಡಕ್ಕೆ ಒಂದಷ್ಟು ಒಳ್ಳೆಯ ಚಿತ್ರಗಳನ್ನಾದರೂ ನೀಡುತ್ತಿದ್ದೆ ಎಂದು ಬೇಸರ ವ್ಯಕ್ತ ಪಡಿಸಿದರು.
ರಾಜಕಾರಣಕ್ಕೆ ನಾನು ಬೇಕು ಎಂದು ಜನ ಬಯಸುವುದಾದರೇ ಉಪಯೋಗಿಸಿಕೊಳ್ಳಲಿ, ಇಲ್ಲವಾದರೇ 2018 ನನ್ನ ಕೊನೆಯಚುನಾವಣೆ ಎಂದು ಘೋಷಿಸಿದರು.
ನನಗೆ ರಾಜಕೀಯದ ಬಗ್ಗೆ ಹತಾಶೆ ಅಥವಾ ನಿರಾಸೆ ಇಲ್ಲ. ಆಕಸ್ಮಿಕವಾಗಿ ಸಿಕ್ಕ 20 ತಿಂಗಳ ಅವಧಿಯಲ್ಲಿ 20 ವರ್ಷ ನೆನಪಿಸಿಕೊಳ್ಳುವಂತೆ ಕೆಲಸ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.