ಬಾಬೂರಾವ್ ಚಿಂಚನಸೂರ್ ಮತ್ತು ಜಗದೀಶ್ ಶೆಟ್ಟರ್ 
ರಾಜಕೀಯ

ಟೆಂಡರ್ ಮೊತ್ತ ಹೆಚ್ಚಿಸಲು ಸಚಿವ ಚಿಂಚನಸೂರ್ ರಿಂದ 2 ಕೋಟಿ ಲಂಚ ಬೇಡಿಕೆ: ಶೆಟ್ಟರ್ ಆರೋಪ

ಬ್ರೇಕ್‌ ವಾಟರ್‌ ಕಾಮಗಾರಿಯ ಟೆಂಡರ್‌ ಮಂಜೂರು ಮಾಡಿಸಲು ಬಂದರು ಸಚಿವ ಬಾಬುರಾವ್‌ ಚಿಂಚನಸೂರು ಅವರು ಗುತ್ತಿಗೆ ಕಂಪೆನಿಯೊಂದರಿಂದ ರು. 2 ...

ಬೆಂಗಳೂರು: ಬ್ರೇಕ್‌  ವಾಟರ್‌ ಕಾಮಗಾರಿಯ ಟೆಂಡರ್‌  ಮಂಜೂರು ಮಾಡಿಸಲು ಬಂದರು ಸಚಿವ ಬಾಬುರಾವ್‌ ಚಿಂಚನಸೂರು ಅವರು ಗುತ್ತಿಗೆ ಕಂಪೆನಿಯೊಂದರಿಂದ ರು. 2 ಕೋಟಿ ಲಂಚ ಪಡೆದಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್‌ ಇನ್ನೊಂದು ಪ್ರಕರಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)  ಕಾಮಗಾರಿಯೊಂದರಲ್ಲಿ ಟೆಂಡರ್‌ ಮೊತ್ತ ಹೆಚ್ಚಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ದೂರಿದ್ದಾರೆ .ಪ್ರಕರಣಗಳಿಗೆ ಸಂಬಂಧಿಸಿದಂತೆ ಸಚಿವರು ಹಾಗೂ ಗುತ್ತಿಗೆದಾರರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಗಳ ಧ್ವನಿ ತುಣುಕುಗಳನ್ನು ಶೆಟ್ಟರ್ ಬಿಡುಗಡೆ ಮಾಡಿದರು.

ಸಾರ್ವಜನಿಕರಿಂದ ಲಭ್ಯವಾದ ಈ ಧ್ವನಿ ತುಣುಕಿನಲ್ಲಿರುವುದು ಸಚಿವರದೇ ಧ್ವನಿ. ಇದನ್ನು ದೃಢೀಕರಣ ಪರೀಕ್ಷೆಗೆ ಒಳಪಡಿಸಿಲ್ಲ. ಆದರೆ, ಸಚಿವರು ಈ ಆರೋಪ ನಿರಾಕರಿಸಿದರೆ, ಅದನ್ನು ಸಾಬೀತುಪಡಿಸಲು ಸಿದ್ಧ  ಎಂದು ಸವಾಲು ಹಾಕಿದರು.

ಕೆಐಎಡಿಬಿ ಕಾಮಗಾರಿಯ  ಟೆಂಡರ್‌  ಪ್ರಕರಣದ ಸಂಭಾಷಣೆಯಲ್ಲಿ ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಅವರ ಹೆಸರೂ ಪ್ರಸ್ತಾಪವಾಗಿದೆ. ದೇಶಪಾಂಡೆ ಅವರಿಗೆ ಲಂಚ ನೀಡಬೇಕಾಗುತ್ತದೆ ಎಂದು ಗುತ್ತಿಗೆದಾರರು ಹೇಳಿರುವ ಧ್ವನಿ ತುಣುಕು ಲಭ್ಯವಾಗಿದೆ. ಹಾಗಾಗಿ ಅವರೂ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕ ಎಂದು ಶೆಟ್ಟರ್‌ ಆಗ್ರಹಿಸಿದ್ದಾರೆ.

ಈ ಎರಡೂ ಪ್ರಕರಣಗಳನ್ನು ಸಿಬಿಐ  ತನಿಖೆಗೆ ಒಳಪಡಿಸಬೇಕು. ಸಚಿವರಾದ  ಚಿಂಚನಸೂರು ಮತ್ತು ಆರ್‌.ವಿ. ದೇಶಪಾಂಡೆ ರಾಜೀನಾಮೆ ನೀಡಬೇಕು. ಅವರಾಗಿ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಶೆಟ್ಟರ್ ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!