ಬೆಂಗಳೂರು: ಭೂ ಕಬಳಿಕೆ ಮಾಡಿ ಬಿಡದಿಯಲ್ಲಿ 200 ಎಕರೆ ಭೂಮಿ ಹೊಂದಿದ್ದೇನೆ ಎಂಬ ಆರೋಪ ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ನಾನು ಭೂಕಬಳಿಕೆ ಮಾಡಿದ್ದರೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ 46 ಎಕರೆ ಭೂಮಿಯನ್ನು 80 ರ ದಶಕದಲ್ಲಿ ಸ್ವಂತ ಹಣದಿಂದ ಖರೀದಿಸಿದ್ದು ಬಿಟ್ಟರೆ, ನಮ್ಮ ಕುಟುಂಬಕ್ಕೆ ಸೇರಿದ ಬೇರೆ ಭೂಮಿ ಇಲ್ಲ. ಎಸ್.ಆರ್. ಹಿರೇಮಠ್ ಆರೋಪದಂತೆ 200 ಎಕರೆ ಕಬಳಿಕೆ ಮಾಡಿದ್ದು ಸಾಬೀತಾದರೆ ಅಷ್ಟೂ ಭೂಮಿಯನ್ನು ಹಂಚಿಬಿಡುತ್ತೇನೆ ಎಂದು ಕುಮಾರಸ್ವಾಮಿ ಸೋಮವಾರ ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ವಕೀಲರೊಬ್ಬರು ಸಾಗಿಸುತ್ತಿದ್ದ 1.97 ಕೋಟಿ ಪತ್ತೆ ಆದ ಬಳಿಕ ಜನರ ಗಮನವನ್ನು ಆ ವಿಷಯದಿಂದ ಬೇರೆಡೆ ಸೆಳೆಯುವ ಉದ್ದೇಶದಿಂದ ಭೂ ಕಬಳಿಕೆ ವಿಚಾರ ಪ್ರಸ್ತಾಪಿಸಲಾಗಿದೆ ಎಂದು ಕುಮಾರ ಸ್ವಾಮಿ ಆರೋಪಿಸಿದ್ದಾರೆ.