ಬಸವರಾಜ್ ರಾಯರೆಡ್ಡಿ 
ರಾಜಕೀಯ

'ಮೋದಿಗೆ ಅಧಿಕಾರ ಬೇಕು ಅಂದ್ರೆ ಸಾಯಲಿ ಬಿಡಿ': ಕೆಂಪು ದೀಪ ನಿಷೇಧದ ಪ್ರಶ್ನೆಗೆ ಸಚಿವ ಬಸವರಾಜ್ ರಾಯರೆಡ್ಡಿ ಉತ್ತರ

ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಕೆಂಪು ದೀಪ ತೆಗೆದ್ರೆ ಸಾಕಾಗಲ್ಲ, ಅವರು ಭದ್ರತೆಯನ್ನೂ ತ್ಯಜಿಸಲಿ ಎಂದು ಉನ್ನತ ಶಿಕ್ಷಣ ಸಚಿವ....

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಕೆಂಪು ದೀಪ ತೆಗೆದ್ರೆ ಸಾಕಾಗಲ್ಲ, ಅವರು ಭದ್ರತೆಯನ್ನೂ ತ್ಯಜಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಶುಕ್ರವಾರ ಪ್ರಧಾನಿಗೆ ಸವಾಲು ಹಾಕಿದ್ದಾರೆ.
ಇಂದು ಕೇಂದ್ರ ಸರ್ಕಾರ ಗಣ್ಯರ ಕಾರಿನ ಮೇಲೆ ಕೆಂಪು ದೀಪ ನಿಷೇಧಿಸಿದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ ಅವರು, ಕೆಂಪು ದೀಪ ತೆಗೆದು ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಮೋದಿ ಅವರು ಮೊದಲು ಭದ್ರತೆಯನ್ನು ತೆಗೆದು ಹಾಕಲಿ. ತಮ್ಮದೂ ತೆಗೆದು ಹಾಕಲಿ ಎಂದರು.
ಈ ವೇಳೆ ಮೋದಿಯವರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಭದ್ರತೆ ತೆಗೆಯಲು ಹೇಗೆ ಸಾಧ್ಯ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು. ಅಧಿಕಾರ ಬೇಕು ಅಂದ್ರೆ ಸಾಯಲಿ ಬಿಡಿ. ಅಧಿಕಾರ ಬೇಕಾದ್ರೆ ಸಾಯಬೇಕಪ್ಪ. ಯಾರೇನು ಮಾಡಕ್ಕಾಗುತ್ತೆ ಅದಕ್ಕೆ? ಅಧಿಕಾರ ಬೇಡ ಅಂದ್ರೆ ಮನೆಯಲ್ಲಿ ಕುಳಿತುಕೊಳ್ಳಲಿ. ಆಗ ಯಾರು ಅವರನ್ನು ಸಾಯಿಸಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನನಗೆ ಆ ಸ್ಥಾನ ನೀಡಿದರೂ ನಿಭಾಯಿಸಲು ನಾನು ಸಿದ್ಧ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

ಲಂಕಾ ವಿರುದ್ಧ ಏಕದಿನ, ಟೆಸ್ಟ್​ ತಂಡ ಪ್ರಕಟ: ರಿಷಭ್ ಪಂತ್‌ಗೆ ಕೊಕ್; ಕನ್ನಡಿಗ ಕೆಎಲ್ ರಾಹುಲ್ ಉಪನಾಯಕ

NEET ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತ ಆರೋಪಿಗಳ ಕೋಚಿಂಗ್ ಸೆಂಟರ್ ಕಟ್ಟಡಗಳನ್ನು ಕೆಡವಿ; ಮಹಾ ಸಚಿವ ಆಗ್ರಹ

ದೇವಾಲಯಗಳ ಚಿನ್ನದ ಮೇಲೆ ಪ್ರಧಾನಿ ಮೋದಿ ಕಣ್ಣು?: ಕೇಂದ್ರ ಸರ್ಕಾರ ಹೇಳಿದ್ದೇನು?

Ebola outbreak: ಮಾರಣಾಂತಿಕ ಎಬೋಲಾಗೆ 131 ಸಾವು, 500ಕ್ಕೂ ಹೆಚ್ಚು ಶಂಕಿತ ಕೇಸ್; ವಿಶ್ವಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ!

SCROLL FOR NEXT