ಡಿ.ಕೆ ಶಿವಕುಮಾರ್ 
ರಾಜಕೀಯ

ರೈತರ ಅನಧಿಕೃತ ಪಂಪ್ ಸೆಟ್ ತೆಗೆಸಲು ಹೋದರೆ ನಮ್ಮ ಕುರ್ಚಿ ಅಲುಗಾಡುತ್ತದೆ: ಡಿ.ಕೆ ಶಿವಕುಮಾರ್

ರಾಜ್ಯದಲ್ಲಿರುವ ನದಿ, ಕೆರೆ, ಕಾಲುವೆಗಳಿಗೆ ಲಕ್ಷಾಂತರ ರೈತರು ಅನಧಿಕೃತವಾಗಿ ಪಂಪ್ ಸೆಟ್ ಗಳನ್ನು ಅಳವಡಿಸಿದ್ದು, ಈ ರೈತರುಗಳ ವಿರುದ್ಧ ಕ್ರಮ ...

ಬೆಂಗಳೂರು: ರಾಜ್ಯದಲ್ಲಿರುವ ನದಿ, ಕೆರೆ, ಕಾಲುವೆಗಳಿಗೆ ಲಕ್ಷಾಂತರ ರೈತರು ಅನಧಿಕೃತವಾಗಿ ಪಂಪ್ ಸೆಟ್ ಗಳನ್ನು ಅಳವಡಿಸಿದ್ದು, ಈ ರೈತರುಗಳ  ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಡಿ.ಕೆ ಶಿವಕುಮಾರ್,  ಬೋರ್ ವೆಲ್ ಗಳನ್ನು ತೆಗೆಸಿದ ಬಳಿಕ ಅದರಲ್ಲಿ ಕಡಿಮೆ ನೀರು ಬರುತ್ತಿದ್ದರೇ,  ಬೋರ್ ವೆಲ್  ನೀರು ನಿಂತು ಹೋದರೇ ಹಾಗೂ ಬೋರ್ ವೆಲ್ ನ ನೀರು ಜಮೀನಿಗೆ ಸಾಕಾಗದಿದ್ದಾಗ ರೈತರುಗಳು 15 ರಿಂದ 20 ಕಿ.ಮೀ ವರೆಗೆ ಅನಧಿಕೃತ ಪಂಪ್ ಸೆಟ್ ಗಳನ್ನು ಹಾಕಿ ನದಿ, ಕೆರೆ, ಕಾಲುವೆಗಳಿಂದ ನೀರನ್ನು ಪಡೆಯುತ್ತಾರೆ.
ಈ ರೈತರ  ವಿರುದ್ಧ ಕ್ರಮ ಕೈಗೊಳ್ಳಲು ಹೋದರೇ ರೈತರು ಪ್ರತಿಭಟನೆಗೆ ಇಳಿಯುತ್ತಾರೆ, ಆಗ ನಮ್ಮ ಹಾಗೂ ನಿಮ್ಮ ಕುರ್ಚಿ ಅಲುಗಾಡುತ್ತದೆ ಎಂದು ತಮಾಷೆಯಾಗಿ ಉತ್ತರಿಸಿದರು. 
ನೀರಾವರಿ ಅಳವಡಿಸಿಕೊಂಡಿರುವ ಪ್ರತಿ ರೈತನಿಗೂ  ಸರ್ಕಾರ 60 ಸಾವಿರ ರು. ವಿದ್ಯುತ್ ಸಬ್ಸಿಡಿ ನೀಡುತ್ತಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಹೆಚ್ಚು ವಿದ್ಯುತ್ ಸಬ್ಸಿಡಿಯನ್ನು ರೈತರು ಸಬ್ಸಿಡಿ ಮೂಲಕ ನೀಡುತ್ತಿದೆ ಎಂದು ಹೇಳಿದರು.
ಸದ್ಯ 4,84,690 ಅನದಿಕೃತ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, 3,63,065 ಪಂಪ್ ಸೆಟ್ ಗಳಿಗೆ 10 ಸಾವಿರ ರು ನ ನಂತೆ ಪಾವತಿಸಬೇಕಾಗಿದೆ. 2,48,574 ಪಂಪ್ ಸೆಟ್ ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್