ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯಬೇಕೆಂದು ಹಂಬಲಿಸುತ್ತಿರುವವರಿಗೆ ಚುನಾವಣೆ ಕಠಿಣವಾಗಿದೆ.
ಬಿಜೆಪಿಯ ಮಿಷನ್-150, ತಮ್ಮ ತಮ್ಮ ಕ್ಷೇತ್ರಗಳಿಂದ ಪ್ರತಿ ಅಭ್ಯರ್ಥಿಯು 100 ಮಂದಿಯನ್ನು ಪಕ್ಷಕ್ಕೆ ನೋಂದಾಯಿಸಬೇಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಸ್ಟ್ 3 ರಿಂದ ರಾಜ್ಯ ಭೇಟಿಗೆ ಆಗಮಿಸಲಿದ್ದಾರೆ. ಅಷ್ಟರೊಳಗೆ ಸದಸ್ಯರ ನೋಂದಣಿ ಕಾರ್ಯ ನಡೆಯಬೇಕೆಂದು ಹೇಳಲಾಗಿದೆ.
ಬಿಜೆಪಿ ಕಚೇರಿಯಲ್ಲಿ ಹಿರಿಯ ಮುಖಂಡರು, ಜಿಲ್ಲಾ ಘಟಕದ ಮುಖಂಡರ ಜೊತೆ ಸಭೆ ನಡೆಸಿದ ಬಿ.ಎಸ್ ಯಡಿಯೂರಪ್ಪ ಡಿಸೆಂಬರ್ ನಲ್ಲಿ ನಡೆಯುವ ಅವಧಿಪೂರ್ವ ಚುನಾವಣೆಗೆ ಸಿದ್ಧರಾಗಿ ಎಂದು ಕರೆ ನೀಡಿದ್ದಾರೆ.
ಮತದಾರರ ಜೊತೆ ನಿಕಟ ಸಂಪರ್ಕ ಹೊಂದಿರುವವರಿಗೆ ಮಾತ್ರ ಟಿಕೆಟ್ ನೀಡುವುದಾಗಿ ಯಡಿಯೂರಪ್ಪ ಖಡಕ್ ಸಂದೇಶ ನೀಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳು, ಪದಾಧಿಕಾರಿಗಳು, ಪ್ರಸ್ತುತ ಶಾಸಕರು ಅವರವರ ಕ್ಷೇತ್ರದಿಂದ ಕನಿಷ್ಠ ಪಕ್ಷ 100 ಮಂದಿಯನ್ನು ಪಕ್ಷಕ್ಕೆ ನೋಂದಾಯಿಸಿಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಅಮಿತ್ ಶಾ ಭೇಟಿಯೊಳಗೆ ಈ ಕೆಲಸವನ್ನು ಸಂಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಆದೇಶವನ್ನು ಯಾರಾದರೂ ನಿರ್ಲಕ್ಷಿಸಿದರೇ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ಭಾಗವಾಗಿ ಅಮಿತ್ ಶಾ ಎಲ್ಲಾ ಜಿಲ್ಲೆಗಳ ಮುಖಂಡರೊಂದಿಗೊ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ