ಬೆಂಗಳೂರು: ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ರಾಜ್ಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಇವರ ಜೊತೆಗೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಪುತ್ರ ರಕ್ಷಿತ್ ಶಿವರಾಮ್ ಕೂಡ ಯೂಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
2018ರ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷದ ವಿವಿಧ ಹುದ್ದೆಗಳ ಮೇಲೆ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿದೆ. ಕಾಂಗ್ರೆಸ್ ಹಿರಿಯ ಮುಖಂಡ ಭೂಪೇಂದ್ರ ಸಿಂಗ್ ಅವರಿಗೆ ಚುನಾವಣೆ ವೈಖರಿ ಬಗ್ಗೆ ದೂರು ನೀಡಲಾಗಿದೆ.
ಯೂಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 8 ಆಕಾಂಕ್ಷಿಗಳಿದ್ದಾರೆ, ಸಿಂಧನೂರು ಶಾಸಕ ಹಂಪನಗೌಡ ಬಿದರ್ಲಿ ಸೋದರಳಿಯ ಬಸನಗೌಡ ಬಿದರ್ಲಿ, ಮಧುಗಿರಿ ಶಾಸಕ ಕೆ,ಎನ್ ರಾಜಣ್ಣ ಪುತ್ರ ಕೆ.ಎನ್ ರಾಜೇಂದ್ರ, ಉಮೇಶ್ ಬೈರೇಗೌಡ, ಶಿವಕುಮಾರ್, ಅಮೃತರಾಜ್, ಕೆ, ಕೆಂಪರಾಜ್ ಪುಷ್ಪಾಲತಾ ಮತ್ತು ಸೌಮ್ಯ ತಬ್ರೇಜ್ ಆಕಾಂಕ್ಷಿಗಳಾಗಿದ್ದಾರೆ.
ಮೇ 14 ರಿಂದ 17 ರವರೆಗೆ ಚುನಾವಣೆ ನಡೆಯಲಿದ್ದು 3,62 ಲಕ್ಷ ಮತದಾರರಿದ್ದಾರೆ, ಮೇ 18 ರಿಂದ ಆಯಾಯಾಜಿಲ್ಲಾ ಸಮಿತಿಗಳಲ್ಲಿ ಮತ ಎಣಿಕೆ ನಡೆಯಲಿದೆ, ಮೇ 19 ರಂದು ಬೆಂಗಳೂರಿನಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಮತ ಎಣಿಕೆ ನಡೆಯಲಿದೆ.