ಬಿಜೆಪಿ ಆಯ್ತು, ಇದೀಗ ಚುನಾವಣಾ ಯಾತ್ರೆಗೆ ಜೆಡಿಎಸ್ ರೆಡಿ 
ರಾಜಕೀಯ

ಬಿಜೆಪಿ ಆಯ್ತು, ಇದೀಗ ಚುನಾವಣಾ ಯಾತ್ರೆಗೆ ಜೆಡಿಎಸ್ ರೆಡಿ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವಂತೆಯೇ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಗಳು ಚುರುಕುಗೊಂಡಿದ್ದು, ಬಿಜೆಪಿ ಪರಿವರ್ತನಾ ರ್ಯಾಲಿ ಬಳಿಕ ಇದೀಗ ಜೆಡಿಎಸ್ ಕೂಡ ಯಾತ್ರೆ ನಡೆಸಲು...

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವಂತೆಯೇ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಗಳು ಚುರುಕುಗೊಂಡಿದ್ದು, ಬಿಜೆಪಿ ಪರಿವರ್ತನಾ ರ್ಯಾಲಿ ಬಳಿಕ ಇದೀಗ ಜೆಡಿಎಸ್ ಕೂಡ ಯಾತ್ರೆ ನಡೆಸಲು ಸಿದ್ಧವಾಗಿ ನಿಂತಿದೆ. 
ಚುನಾವಣಾ ಪ್ರಚಾರಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವಲ್ಲಿ ಮುಂದಾಗಿರುವ ಜೆಡಿಎಸ್, ತಾನು ಹಮ್ಮಿಕೊಳ್ಳುತ್ತಿರುವ ಕರ್ನಾಟಕ ವಿಕಾಸ ಯಾತ್ರೆಗಾಗಿ ಆಧುನಿಕ ಸೌಲಭ್ಯವುಳ್ಳ ಹೈಟೆಕ್ ಬಸ್ ನ್ನು ಸಿದ್ಧಪಡಿಸಿದೆ. ಯಾತ್ರಾ ಬಸ್ಸಿಗೆ ವಿಕಾಸ ವಾಹಿನಿ ಎಂದು ಹೆಸರಿಡಲಾಗಿದ್ದು, ನಿನ್ನೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಚಾಲನೆ ನೀಡಿದರು. 
ನ.7ರಿಂದ ಮೈಸೂರಿನಿಂದ ಚುನಾವಣಾ ಪ್ರಚಾರ ಆರಂಭಗೊಳ್ಳಲಿದ್ದು, ಅಂದಿನಿಂದ ಈ ಅತ್ಯಾಧುನಿಕ ಬಸ್ ಬಳಕೆಯಾಗಲಿದೆ. ಚುನಾವಣಾ ಪ್ರಚಾರಕ್ಕಾಗಿ ಕುಮಾರಸ್ವಾಮಿಯವರು ಬಸ್ಸನ್ನು ಬಳಕೆ ಮಾಡಲಿದ್ದು, 3 ತಿಂಗಳ ಕಾಲ ರಾಜ್ಯಾದ್ಯಂತ ವಿಶೇಷ ಬಸ್ ನಲ್ಲಿ ತೆರಳಲಿದ್ದಾರೆ. 

ಕುಮಾರಸ್ವಾಮಿಯವರಿಗೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಯಾಗಿರುವುದರಿಂದ ವಿಶೇಷ ಸವಲತ್ತನ್ನು ಬಸ್ಸಿನಲ್ಲಿ ಮಾಡಲಾಗಿದೆ. ಪ್ರಚಾರ ಸಂದರ್ಭದಲ್ಲಿ ಬಸ್ಸಿನಲ್ಲಿ ಉಳಿದುಕೊಂಡು ವಿಶ್ರಾಂತಿ ಪಡೆದು ದಣಿವು ಆರಿಸಿಕೊಳ್ಳಬಹುದಾಗಿದೆ. ಆ ರೀತಿಯಲ್ಲಿ ಬಸ್ಸನ್ನು ಸಜ್ಜುಗೊಳಿಸಲಾಗಿದೆ. 

ಪ್ರಚಾರ ಕಾರ್ಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್.ಡಿ. ಕುಮಾರಸ್ವಾಮಿಯವರು, ಶುಕ್ರವಾರದಿಂದಲೇ ಆರಂಭವಾಗಬೇಕಿದ್ದ ಪ್ರವಾಸವನ್ನು ಶಾಸಕ ಚಿಕ್ಕಮಾದು ನಿಧನದಿಂದಾಗಿ ಮುಂದೂಡಲಾಗಿತ್ತು. ನ.7 ರಿಂದ ಮೊದಲ ಹಂತದ ರಾಜ್ಯ ಪ್ರವಾಸವನ್ನು ಆರಂಭಿಸಲಾಗುವುದು. ಈ ಹಿಂದೆ ಮಾಡಲಾಗಿದ್ದ ಯೋಜನೆಯಂತೆಯೇ ಎಲ್ಲಾ ಕಾರ್ಯಗಳು ನಡೆಯಲಿದೆ. ಮೈಸೂರು ಬಳಿಕ ವಿಶೇಷ ಬಸ್ಸಿನಲ್ಲಿಯೇ ಚಿಕ್ಕಮಗಳೂರಿಗೆ ಹೋಗಲಾಗುತ್ತದೆ ಎಂದು ಹೇಳಿದ್ದಾರೆ. 

ಚಿಕ್ಕಮಗಳೂರಿನಲ್ಲಿಯೇ ರಾತ್ರಿ ಉಳಿದಿ ಬಳಿಕ ಶಿವಮೊಗ್ಗ ಜಿಲ್ಲೆಗೆ ತೆರಳಿ ಅಲ್ಲಿ ಪಾದಯಾತ್ರೆಯನ್ನು ನಡೆಸಲಾಗುತ್ತದೆ. ನ.7 ರಂದು ರಾಯಚೂರಿನಲ್ಲಿ ಬೈಕ್ ರ್ಯಾಲಿಗಳನ್ನು ನಡೆಸಲಾಗುತ್ತದೆ. ನ.13 ರಂದು ಬೆಳಗಾವಿಯಲ್ಲಿ ಬೃಹತ್ ರ್ಯಾಲಿನ್ನು ಆಯೋಡಿಸಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ