ಬೆಳಗಾವಿ: ಶಾಸಕರ ನಿರುತ್ಸಾಹದ ಸ್ಪಂದನೆ ಹಾಗೂ ಕೆಲವು ಪ್ರಮುಖ ನಿರ್ಣಯಗಳ ಜೊತೆ ಹಲವು ಪ್ರತಿಭಟನೆ, ಧರಣಿಗಳಿಗೆ ಸಾಕ್ಷಿಯಾಗುವ ಮೂಲಕ 10 ದಿನಗಳ ಕಾಲ ನಡೆದ ಬೆಳಗಾವಿ ಅಧಿವೇಶನ ಶುಕ್ರವಾರ ಕೊನೆಗೊಂಡಿತು.
ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಹಿನ್ನಲೆಯಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿತ್ತು. ಆದರೆ, ವಿಧಾನಸಭೆಯಲ್ಲಿ ಕೇವಲ ನಾಲ್ವರು ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡರೆ, ವಿಧಾನ ಪರಿಷತ್ ನಲ್ಲಿ 25 ಶಾಸಕರು ಭಾಗಿಯಾಗಿದ್ದರು. ಶಾಸಕರ ನಿರುತ್ಸಾಹ ಸ್ಪಂದನೆ ಅಧಿವೇಶನದಲ್ಲಿ ಎದ್ದು ಕಂಡಿತ್ತು.
ಅಧಿವೇಶನದ ಮೊದಲ ದಿನವೇ ಖಾಸಗಿ ವೈದ್ಯರ ಮುಷ್ಕರದ ಕಪ್ಪು ಛಾಯೆ ಉಭಯ ಸದನಗಳಲ್ಲಿ ಪ್ರತಿಧ್ವನಿಸಲಾರಂಭಿಸಿತ್ತು. ಈ ಪ್ರತಿಧ್ವನಿ ವಾರವಿಡೀ ಮುಂದುವರೆದು ಸರ್ಕಾರವನ್ನು ಕಂಗಾಲಾಗುವಂತೆ ಮಾಡಿತ್ತು. ಈ ನಡುವೆ ಪ್ರತಿಪಕ್ಷ ಬಿಜೆಪಿ ನಾಯಕರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಸಚಿವ ಚಾರ್ಜ್ ರಾಜಿನಾಮೆಗೆ ಆಗ್ರಹಿಸಿ ಅಧಿವೇಶನದ 2 ದಿನ ಪಟ್ಟು ಹಿಡಿಯಿತು. ಬಿಜೆಪಿ ಹೋರಾಟ ಹಾಗೂ ಪ್ರತಿಭಟನೆಗೆ ಸೊಪ್ಪು ಹಾಕರ ಸರ್ಕಾರ ಬೇಡಿಕೆಗಳನ್ನು ತಳ್ಳಿ ಹಾಕಿತು.
ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ಕೆಲ ಮಹತ್ವಾಕಾಂಕ್ಷಿ ವಿಧೇಯಕಯವನ್ನು ಅಂಗೀಕರಿಸಿಕೊಂಡಿದ್ದು ಬಿಟ್ಟರೆ ಮತ್ತಾವುದೇ ಗಮನಾರ್ಹ ಸಂಗತಿಗಳ ಚರ್ಚೆ ನಡೆಯಲಿಲ್ಲ. ವೈದ್ಯರ ಮುಷ್ಕರ ಹಾಗೂ ರೋಗಿಗಳ ಸಾವಿನ ಕರಿನೆರಳಲ್ಲಿ ಅಧಿವೇಶ ನಡೆದರೂ ಅಂತಿಮವಾಗಿ ಸಂಧಾನದ ಮೂಲಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ಅಂಗೀಕಾರ ಮಾಡಿಕೊಳ್ಳಲು ಸರ್ಕಾರ ಯಶಸ್ವಿಯಾಯಿತು. ಇದರ ಬೆನ್ನಲ್ಲೇ ಮೌಢ್ಯ ನಿಷೇಝ ಕಾಯ್ದೆದೂ ಉಭಯ ಸದನಗಳು ಒಪ್ಪಿಗೆ ನೀಡಿದವು. ಎರಡೂ ವಿದೇಯಕಗಳು ಮೂಲ ಸ್ವರೂಪ ಕಳೆದುಕೊಂಡು ಹಲ್ಲಿಲ್ಲಿದ ಹಾವಿನಂತಾಗಿದೆ ಎಂಬ ಆರೋಪ ಬಂದರೂ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಇವೆರಡೂ ವಿಧೇಯಕಗಳು ಕಾರಣವಾದವು.
ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಸರ್ಕಾರವನ್ನು ಹಣಿಯುವಲ್ಲಿ ಪ್ರತಿಪಕ್ಷಗಳು ವಿಫಲವಾದವು. ಇದೇ ಸಂದರ್ಭವನ್ನು ಉತ್ತಮವಾಗಿ ಬಳಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಮೂಲಕ ಉತ್ತರ ಕರ್ನಾಟಕಕ್ಕೆ ತಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ವಿವರಿಸಿದರು.
ಅಧಿವೇಶನದ ವೇಳೆ ಪ್ರತಿಪಕ್ಷಗಳ ವಿರುದ್ಧ ಸ್ಪೀಕರ್ ಕೋಳಿವಾಡ ಅವರು ಕಿಡಿಕಾರಿದ್ದರು. ಉತ್ತರ ಕರ್ನಾಟಕ ಜನತೆಯ ಸಂಕಷ್ಟಗಳು ಹಾಗೂ ಸಮಸ್ಯೆಗಳನ್ನು ಚರ್ಚೆಸುವಲ್ಲಿ ಪ್ರತಿಪಕ್ಷಗಳು ವಿಫವಾಗಿದ್ದಕ್ಕೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಜನತೆಯ ಸಂಕಷ್ಟಗಳ ಪರಿಹರಿಸಲು ಸಿಕ್ಕಿದ್ದ ಅವಕಾಶವನನ್ನು ಬಳಸಿಕೊಳ್ಳುವಲ್ಲಿ ಪ್ರತಿಪಕ್ಷಗಳು ವಿಫಲವಾಗಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics