ರಾಜಕೀಯ

ಮೋದಿ ಮನ್ ಕೀ ಬಾತ್ ಗೆ ಟಾಂಗ್ ನೀಡಲು ಸಿದ್ದರಾಮಯ್ಯ ‘ಕಾಮ್ ಕೀ ಬಾತ್’

Shilpa D
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಮೂಲಕ ಎಲ್ಲಾ ವರ್ಗದವರನ್ನು ತಲುಪುತ್ತಿರುವುದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ತಾವು ಕೂಡ ಅದೇ ದಾರಿಯಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಕಸರತ್ತು ಆರಂಭಿಸಿದ್ದಾರೆ.
ಚಿತ್ರದುರ್ಗದ ಮುರುಘಾಮಠದ ಕಾರ್ಯಕ್ರಮದಲ್ಲಿ  ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರದ್ದು ಮನ್ ಕೀ ಬಾತ್,  ಮನ್ ಕೀ ಬಾತ್ನಿಂದ ಏನು ಕೆಲಸ ಆಗ್ತಿಲ್ಲ. ನಮ್ಮ ಸರ್ಕಾರದ್ದು ‘ಕಾಮ್ ಕೀ ಬಾತ್’. ಇದು ಕೇಂದ್ರದ ಕಾಪಿ ಅಲ್ಲ. ಜನರ ಕೆಲಸ ಮಾಡುವುದು' ಎಂದು ಹೇಳಿದ್ದಾರೆ. ಬಿಜೆಪಿಯವರು ಜನರ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ. ಸುಮ್ಮನೆ ಮಾತನಾಡುತ್ತಿದ್ದಾರೆ. ನಾವು ಕೆಲಸ ಮಾಡುವ ಉದ್ದೇಶದಿಂದ ಮಾತನಾಡುತ್ತೇವೆ' ಎಂದರು.
ಪ್ರತಿವಾರ ದೃಶ್ಯ ಮಾಧ್ಯಮದ ಮೂಲಕ ಜನರನ್ನು ಸಂಪರ್ಕಿಸಲು  ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ, ಸರ್ಕಾರದ ಮೂಲಗಳ ಪ್ರಕಾರ, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ತಾಲೂಕು ಕೇಂದ್ರಗಳಲ್ಲಿ ಬೃಹತ್ ಎಲ್ ಇಡಿ ಅಳವಡಿಸಿ, ಅದರ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು 17 ಕೋಟಿ ರು ವ್ಯಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೈ ಕಮಾಂಡ್ ಅಸಮಾಧಾನ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೊಳ್ಳಲಾಗುತ್ತಿದೆ, ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿರಿಸಿಕೊಂಡಿರುವ ಸಿದ್ದರಾಮಯ್ಯ ಸ್ವತಃ ತಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕಾಮ್ ಕೀ ಬಾತ್ ಹಮ್ಮಿಕೊಂಡಿದ್ದಾರೆ.
SCROLL FOR NEXT