ಅಮಿತ್ ಶಾ ಮತ್ತು ರಾಹುಲ್ ಗಾಂಧಿ
ಬೆಂಗಳೂರು: ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರು ಪ್ರಮುಖ ಸಮುದಾಯಗಳ ಸ್ವಾಮೀಜಿಗಳನ್ನು ಭೇಟಿ ಮಾಡುವ ಮೂಲಕ ಧರ್ಮ ರಾಜಕಾರಣ ನಡೆಸಿದ್ದಾರೆ.
ಬಾದಾಮಿಯಲ್ಲಿ ವಿವಿಧ ಲಿಂಗಾಯತ ಮಠಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದರು. ಆದರೆ ಕುರುಬ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಕಾಗಿನೆಲೆ ಪೀಠಕ್ಕೆ ಭೇಟಿ ನೀಡುವ ಪ್ರಯತ್ನ ವಿಫಲವಾಯಿತು,
ಏಕೆಂದರೆ ಕಾಗಿನೆಲೆಯ ಕನಕಗುರು ಪೀಠದ ನಿರಂಜನನಂದಾಪುರಿ ಸ್ವಾಮೀಜಿಗಳು ಐಎಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ತೆರಳಿದ್ದರು. ಹರಿಹರ ತಾಲೂಕಿನ ಬೆಳ್ಳೋಡಿ ಮಠದಲ್ಲಿ ಕಾಗಿನೆಲೆ ಶ್ರೀಗಳು ಹಾಗೂ ರಾಹುಲ್ ಗಾಂಧಿ ಭೇಟಿ ಮಾಡಿದ್ದರು.
ಅಮಿತ್ ಶಾ ಅವರ ಪ್ರವಾಸದ ವೇಳಾ ಪಟ್ಟಿಯಲ್ಲಿ ಶ್ರೀಗಳ ಭೇಟಿ ಪ್ರಸ್ತಾಪ ಇರಲಿಲ್ಲ, ಅಮಿತ್ ಶಾ ಬಾದಾಮಿ ತಲುಪಿದ ನಂತರ ಪ್ರತ್ಯೇಕ ಲಿಂಗಾಯತ ಧರ್ಮ ಕ್ಕಾಗಿ ಹೋರಾಡುತ್ತಿರುವ ವಿವಿಧ ಮಠಗಳ ಶ್ರೀಗಳನ್ನು ಭೇಟಿಯಾದರು. ಒಂದು ಗಂಟೆ ಸಮಯದಲ್ಲಿ ಸುಮಾರು 150 ಸ್ವಾಮೀಜಿಗಳನ್ನು ಭೇಟಿ ಮಾಡಿದರು.
ಈ ವೇಳೆ ಮಾತನಾಡಿದ ಅಮಿತ್ ಶಾ ಹಿಂದೂಗಳನ್ನು ವಿಭಜಿಸುವ ಕೆಲಸಕ್ಕೆ ಬಿಜೆಪಿ ಯಾವತ್ತೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ,. ಬುಧವಾರ ರಾಹುಲ್ ಗಾಂಧಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics