ಬಿಜೆಪಿ ಸೇರ್ಪಡೆಯಾದ ಬಸನಗೌಡ ಪಾಚೀಲ್ ಯತ್ನಾಳ್
ಬೆಂಗಳೂರು: ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ಯತ್ನಾಳ್, ಬಸವರಾಜ ಪಾಟೀಲ್ ಅನ್ವಾರಿ ಹಾಗೂ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತು ನಾಗಪ್ಪ ಸಲೋನಿ ಬಿಜೆಪಿ ಸೇರ್ಪಡೆಯಾಗಿದ್ದಾರೆ,
ಯತ್ನಾಳ್ ಮತ್ತು ಅನ್ವಾರಿ ಅವರ ಸೇರ್ಪಡೆಯಿಂದಾಗಿ ಬಿಜೆಪಿ ಪ್ರಚಾರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಪಕ್ಷ ಬಲ ವರ್ದನೆಗೆ ಸಹಕಾರಿಯಾಗಲಿದೆ, ಅಲ್ಲಿನ ಲಿಂಗಾಯತ ಸಮುದಾಯದ ಒಲೈಕೆ ಮಾಡಲು ಸಹಾಯವಾಗಲಿದೆ.
ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಯತ್ನಾಳ್ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ನಂತರ ನಾಯಕರ ಜೊತೆಗಿನ ಕೆಲವು ಭಿನ್ನಾಭಿಪ್ರಾಯಗಳಿಂದ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು, ವಿಜಯಪುರದಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ಗೆ ಯತ್ನಾಳ್ ಸೇರ್ಪಡೆ ವರವಾಗುವ ಸಾಧ್ಯತೆಯಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಅನ್ವಾರಿ 1990 ರಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು. ಕೊಪ್ಪಳ ಜಿಲ್ಲೆಯಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು ಅನ್ವಾರಿ ಸೇರ್ಪಡೆಯಿಂದಾಗಿ ಬಿಜೆಪಿಗೆ ಮತ್ತಷ್ಟು ಸಹಾಯವಾಗಲಿದೆ,
ಇದೇ ವೇಳೆ ಶಾಸಕ ಮಲ್ಲಿಕಾರ್ಜುನ ಖೂಬಾ ರಾಜೀನಾಮೆಯಿಂದ ಜೆಡಿಎಸ್ ಗೆ ಬೀದರ್ ನಲ್ಲಿ ಹಿನ್ನಡೆಯಾಗಲಿದೆ. ಏಪ್ರಿಲ್ 8 ರಂದು ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರಲಿದ್ದಾರೆ,
ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಿಜೆಪಿ ವರಿಷ್ಠರ ವಿರುದ್ಧ ಮಾತನಾಡಿದ ಯತ್ನಾಳ್ ಸೇರಿಸಿಕೊಳ್ಳಬಾದೆಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾದ್ಯಕ್ಷ ವಿಠ್ಠಲ್ ಕಟಕದೊಂಡ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ಪ್ರತಿಭಟನಾಕಾರರು, ಬೇಡವೇ ಬೇಡ ಯತ್ನಾಳ್ ಬೇಡ ಎಂದು ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.