ರಾಜಕೀಯ

ಕರ್ನಾಟಕದಿಂದಲೇ ಬಿಜೆಪಿ ಅಂತ್ಯದ ಕೌಂಟ್ ಡೌನ್ ಆರಂಭ: ಶಾ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ

Shilpa D
ವಿಜಯಾಪುರ: ರಾಜ್ಯದಲ್ಲಿ  ಕೋಮುವಾದಿಗಳ ಆಳ್ವಿಕೆ ಬರಬಾರದು ಎಂದು ನಾಡಿನ ಜನರಿಗೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಕೇಳಿಕೊಳ್ಳುವೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ವಿಜಯಾಪುರದಲ್ಲಿ ಜಸ್ಟ್ ಆಸ್ಕಿಂಗ್ ಫೌಂಡೇಶನ್ ಉದ್ಘಾಟಿಸಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಏಜೆಂಟ್‌ ಅಲ್ಲ. ರಾಜ್ಯದಲ್ಲಿ ರಾಕ್ಷಸರ ಆಳ್ವಿಕೆ ಬರಬಾರದು ಎಂದು ನಾಡಿನ ಜನರಿಗೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಕೇಳಿಕೊಳ್ಳುವುದಾಗಿ ತಿಳಿಸಿದರು. 
ಕರ್ನಾಟಕದಿಂದಲೇ ಬಿಜೆಪಿಯ ಕೌಂಟ್‌ಡೌನ್‌ ಶುರುವಾಗಲಿದೆ. ಉತ್ತರ ಭಾರತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರ ಅಸಹನೆ ಹೆಚ್ಚಿದೆ. 2019ರ ಲೋಕಸಭಾ ಚುನಾವಣೆಯಲ್ಲೇ ಇದರ ಫಲಿತಾಂಶ ದೊರಕಲಿದೆ ಎಂದು ಹೇಳಿದ್ದಾರೆ, 
‘ನಾನು ಹಿಂದೂ ವಿರೋಧಿಯಲ್ಲ. ಮನುಷ್ಯರನ್ನು ಪ್ರಾಣಿಗಳಿಗೆ ಹೋಲಿಸುತ್ತಿದ್ದಾರೆ, ಅವರು ತಮ್ಮ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ, ಹೇಳಿಕೆನೀಡುವಾಗ ಎಚ್ಚರದಿಂದ ನೀಡಬೇಕು, ವಿರಧ ಪಕ್ಷಗಳಿಗೆ ಗೌರವ ನೀಡಬೇಕು ಎಂದು ಅಮಿತ್ ಶಾಗೆ ಸಲಹೆ ನೀಡಿದ್ದಾರೆ.
ಮುನುಷ್ಯರನ್ನು ನಾಯಿ, ಹಾವು ಚೇಳುಗಳಿಗೆ ಹೋಲಿಸುವ ಅಮಿತ್ ಶಾ, ವಿರೋಧ ಪಕ್ಷಗಳ ಭಯದಿಂದಾಗಿ ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 
ಕಾವೇರಿ ನದಿ ಪಾತ್ರದಲ್ಲಿ ರಿಯಲ್ ಎಸ್ಟೇಟ್, ಅಕ್ರಮ ಮರಳು ಮಾಫಿಯಾ ನಡೆದಿದೆ. ರಾಜಕಾರಣಿಗಳು ಆ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಫೌಂಡೇಶನ್‍ನಿಂದ ಕಾವೇರಿ ಸಮಸ್ಯೆ ಬಗ್ಗೆ ವಿವರವಾದ ವರದಿ ತಯಾರಿಸಿ ಜನರ ಎದುರಿಗಿಡುತ್ತೇವೆ ಎಂದು ತಿಳಿಸಿದರು.
SCROLL FOR NEXT