ರಾಜಕೀಯ

ಟಿಕೆಟ್ ಹಂಚಿಕೆಯಲ್ಲಿ ಖರ್ಗೆ, ಸಿದ್ದರಾಮಯ್ಯ ನಡುವೆ ಸಮತೋಲನ ಕಾಪಾಡಲು ರಾಹುಲ್ ಗಾಂಧಿ ಯತ್ನ

Sumana Upadhyaya

ಬೆಂಗಳೂರು: ಸ್ವಾಭಿಮಾನದ ಸಂಘರ್ಷವನ್ನು ತಪ್ಪಿಸಲು ಮತ್ತು ಒಂದೇ ಪಕ್ಷಗಳ ನಾಯಕರ ಮಧ್ಯೆ ಕಲಹವನ್ನು ತಡೆಯುವ ಕೆಲಸವನ್ನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸಮತೋಲನ ಮಾಡುವ ಕೆಲಸ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದಾಗ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮೊದಲಾದವರಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಇಂತಹ ಪರಿಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲು ಸಿದ್ದರಾಮಯ್ಯನವರನ್ನು ಮನವೊಲಿಸುವಲ್ಲಿ ರಾಹುಲ್ ಗಾಂಧಿ ಸಫಲರಾದರು.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಬಹಳ ಚರ್ಚೆ ನಡೆದ ನಂತರ, ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರೆ ಹಳೆ ಮೈಸೂರು ಪ್ರಾಂತ್ಯದ ಜನರಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂಬ ಮಲ್ಲಿಕಾರ್ಜುನ ಖರ್ಗೆಯವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸೋಲೊಪ್ಪಿಕೊಂಡಂತಾಗುತ್ತದೆ ಎಂದು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಒಪ್ಪಿಕೊಂಡಂತಾಗುತ್ತದೆ ಎಂದು ವಿರೋಧ ಪಕ್ಷಗಳು ಶೋಷಿಸಬಹುದು ಎಂದು ಖರ್ಗೆ, ಮೊಯ್ಲಿಯವರ ಅಭಿಪ್ರಾಯವಾಗಿತ್ತು.

ನಿನ್ನೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಹುಲ್ ಗಾಂಧಿ ಸಮತೋಲನದ ಸಮೀಕರಣ ಮಾಡುವ ಪ್ರಯತ್ನ ಮಾಡಿದರು.

ಜೆಡಿಎಸ್ ನ 7 ಮಂದಿ ಬಂಡಾಯ ಶಾಸಕರಿಗೆ ಸಿದ್ದರಾಮಯ್ಯನವರು ನೀಡಿದ್ದ ಭರವಸೆಯಂತೆ ಟಿಕೆಟ್ ನೀಡಲಾಗಿದೆ.

SCROLL FOR NEXT