ಚುನಾವಣಾ ಕಣದಲ್ಲಿರುವ ಹಾಲಿ ಹಾಗೂ ಮಾಜಿ ಸಿಎಂ ಗಳ ಮಕ್ಕಳು
ಬೆಂಗಳೂರು: ಮೇ12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
ತಮ್ಮ ತಂದೆಯಂದಿರ ಅಧಿಕಾರ ಆಡಳಿತ ಮಕ್ಕಳಿಗೆ ಸಹಾಯ ವಾಗಬಹುದು, ಆದರೆ ದೀರ್ಘಾವದಿ ರಾಜಕೀಯದಲ್ಲಿ ವಯಕ್ತಿಕ ವರ್ಚಸ್ಸಿಗೆ ಹೆಚ್ಚಿನ ಬೆಲೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರ ಪುತ್ರ ಡಾ. ಯತೀಂದ್ರ ವರುಣಾದಿಂದ ಕಣಕ್ಕಿಳಿಯುತ್ತಿದ್ದಾರೆ, ತಮ್ಮ ಹಿರಿಯ ಪುತ್ರ ರಾಕೇಶ್ ನಿಧನದ ನಂತರ ಸಿಎಂ ತಮ್ಮ ಎರಡನೇ ಪುತ್ರ ಯತೀಂದ್ರ ಅವರನ್ನು ರಾಜಕೀಯದ ಮುಖ್ಯವಾಹಿನಿಗೆ ಕರೆ ತಂದಿದ್ದಾರೆ. ವೈದ್ಯನಾಗಿದ್ದ ಯತೀಂದ್ರ ಪೂರ್ಣ ಪ್ರಮಾಣದ ರಾಜಕೀಯದಲ್ಲಿ ತೊಡಗಿದ್ದಾರೆ.ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ದ ಯತೀಂದ್ರ ಸ್ಪರ್ದಿಸಲಿದ್ದಾರೆ.
ಪ್ರಮುಖ ನಾಯಕರ ಮಕ್ಕಳು ಚುನಾವೆಯಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮೈಸೂರಿನ ನರಸಿಂಹ ರಾಜ ವಿಧಾನಸಭೆ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಅಷ್ಟು ಜವಪ್ರಿಯ ನಾಯಕರಲ್ಲ, ಆದರೇ ತಮ್ಮ ತಂದೆ ಅಜೀಜ್ ಸೇಠ್ ಅವರ ಹೆಸರಿನ ಆಧಾರ ಮೇಲೆ ಜಯ ಸಾಧಿಸಿದರು ಎಂದು ರಾಜ್ಯಶಾಸ್ತ್ರ ಪ್ರಾದ್ಯಾಪಕ ಪ್ರೊ. ಮುಜಾಫರ್ ಅಝಾದಿ ಹೇಳಿದ್ದಾರೆ.
ರಾಜಕಾರಣಿಯಾಗಿ ಬೆಳೆಯಬೇಕೆಂದರೇ ವಯಕ್ತಿಕ ವರ್ಚಸ್ಸು ಬಹಳ ಮುಖ್ಯ ಎಂದು ಮತ್ತೊಬ್ಬ ರಾಜಕೀಯ ವಿಮರ್ಶಕ ಸಂದೀಪ್ ಶಾಸ್ರ್ತಿತಿಳಿಸಿದ್ದಾರೆ. ತಮ್ಮ ತಂದೆಯ ಹೆಸರಿನ ಮೇಲೆ ನಡೆಸಲು ರಾಜಕಾರಣ ಸ್ವಲ್ಪ ದಿನ ಮಾತ್ರ ನಡೆಯುತ್ತದೆ. ಸಿಎಂ ಆಗಿ ಅವರ ತಂದೆ 10 ವರ್ಷ ಕೆಲಸ ಮಾಡಿದ್ದರೇ ಅವರನ್ನು ಜನ ತುಂಬಾ ದಿನಗಳ ಕಾಲ ನೆನಪಿನಲ್ಲಿಟ್ಟು ಕೊಳ್ಳುತ್ತಾರೆ. ಅವರು ಸಿಎಂ ಆಗಿ ದಶಕಗಳೇ ಕಳೇದಿದ್ದರೂ ಅವರ ಮಕ್ಕಳು ಗೆಲ್ಲುತ್ತಾರೆ ಆದರೆ ವಯಕ್ತಿಕ ಸಾಮರ್ಥ್ಯವೂ ಕೂಡ ಅಷ್ಟೇ ಮುಖ್ಮವಾಗಿದೆ.ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ, ಮಾಡಿದ ಟ್ವೀಟ್ ನಿಂದಾಗಿ ಟಿಕೆಟ್ ಕಳೆದುಕೊಂಡಿದ್ದಾರೆ.