ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಮಾಜಿ ಸಿಎಂ, 12 ಕೋಟಿ ಆಸ್ತಿಗೆ ಒಡೆಯನಾದರೂ ಸ್ವಂತಕ್ಕೊಂದು ಕಾರಿಲ್ಲ!

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಬಳಿ ಸ್ವಂತ ಕಾರು ಇಲ್ಲ.. ಅರೆ ಹೌದು..ಹೀಗೆಂದು ಸ್ವತಃ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 24 Apr 2018, 11:35 am
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಬಳಿ ಸ್ವಂತ ಕಾರು ಇಲ್ಲ.. ಅರೆ ಹೌದು..ಹೀಗೆಂದು ಸ್ವತಃ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ಜಗದೀಶ ಶೆಟ್ಟರ್‌ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿವರವನ್ನು ತಿಳಿಸಿದ್ದಾರೆ. ಶೆಟ್ಟರ್ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಅವರ ಆಸ್ತಿ ಐದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಶೆಟ್ಟರ್‌ ಬಳಿ ಒಟ್ಟು 12.26 ಕೋಟಿ ರು. ಸಂಪತ್ತಿದೆ. ಈ ಪೈಕಿ ಚರಾಸ್ತಿಯು 2.54 ಕೋಟಿ ಮೌಲ್ಯದ್ದಾಗಿದ್ದು, ಶೆಟ್ಟರ್‌ ಹೆಸರಲ್ಲಿ 2.01 ಕೋಟಿ ಚರಾಸ್ತಿ ಇದೆ. ಅಂತೆಯೇ ಪತ್ನಿ ಶಿಲ್ಪಾ ಶೆಟ್ಟರ್‌ ಹೆಸರಲ್ಲಿ 53.02 ಲಕ್ಷ ರು. ಇದೆ.
ಶೆಟ್ಟರ್ ಬಳಿ ಒಟ್ಟು 9.72 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಆ ಪೈಕಿ 9.51 ಕೋಟಿ ಸ್ಥಿರಾಸ್ತಿ ಶೆಟ್ಟರ್‌ ಹೆಸರಲ್ಲಿದ್ದರೆ, ಇನ್ನುಳಿದ ಸುಮಾರು 21 ಲಕ್ಷ ಮೌಲ್ಯದ ಸ್ಥಿರಾಸ್ತಿ ಪತ್ನಿ ಶಿಲ್ಪಾ ಶೆಟ್ಟರ್‌ ಹೆಸರಲ್ಲಿದೆ. ಆದರೆ ಮೋಟರು ವಾಹನ, ಏರ್‌ ಕ್ರಾಫ್ಟ್‌, ದೋಣಿಗಳು, ಹಡಗುಗಳು ಸೇರಿದಂತೆ ಯಾವುದೇ ಬಗೆಯ ವಾಹನಗಳು ಶೆಟ್ಟರ್‌ ಆಗಲಿ ಅವರ ಪತ್ನಿಯಾಗಲಿ ಹೊಂದಿಲ್ಲ.

Advertisement

Advertisement

20.59 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು ಶೆಟ್ಟರ್‌ ಹೆಸರಲ್ಲಿದ್ದರೆ, ಪತ್ನಿ ಹೆಸರಲ್ಲಿ 32.10 ಲಕ್ಷ ಮೌಲ್ಯದ ಚಿನ್ನಾಭರಣ, 1.38 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳಿವೆ. ಎಲ್‌ಐಸಿ ಸೇರಿದಂತೆ ಶೆಟ್ಟರ್‌ ಹೆಸರಲ್ಲಿ 10.26 ಲಕ್ಷ ಮೌಲ್ಯದ ಪಾಲಿಸಿಗಳಿದ್ದರೆ, ಪತ್ನಿ ಹೆಸರಲ್ಲಿ 8.65 ಲಕ್ಷ ಮೌಲ್ಯ ಪಾಲಿಸಿಗಳನ್ನು ಮಾಡಿಸಲಾಗಿದೆ. ಶೆಟ್ಟರ್‌ ಬಳಿ 3.51 ಲಕ್ಷ ನಗದು ಇದ್ದರೆ, ಪತ್ನಿ ಶಿಲ್ಪಾ ಶೆಟ್ಟರ್‌ ಬಳಿ 85 ಸಾವಿರ ನಗದು ಕೈಯಲ್ಲಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
2013ರಲ್ಲಿ ಜಗದೀಶ ಶೆಟ್ಟರ್‌ ಅವರ ಬಳಿ .4.44 ಕೋಟಿ ಆಸ್ತಿ ಇತ್ತು. ಅದೀಗ .12.26 ಕೋಟಿಗೆ ಏರಿದ್ದು, ಒಟ್ಟಾರೆ ಐದು ವರ್ಷದಲ್ಲಿ .7.72 ಕೋಟಿ ಹೆಚ್ಚಳ ಕಂಡಿದೆ.
ಪತ್ನಿಗೂ ಸಾಲ ಕೊಟ್ಟ ಶೆಟ್ಟರ್‌
ಜಗದೀಶ್ ಶೆಟ್ಟರ್ ವಿವಿಧ ಬ್ಯಾಂಕ್‌ ಹಾಗೂ ಸ್ನೇಹಿತರ ಕಡೆ ಕೈಗಡ ಮಾಡಿರುವ ಸಾಲದ ಮೊತ್ತ 2.01 ಕೋಟಿ ತುಂಬಬೇಕಿದೆ. ಇನ್ನು ಶೆಟ್ಟರ್‌ ಅವರು ತಮ್ಮ ಪತ್ನಿ ಶಿಲ್ಪಾ ಶೆಟ್ಟರ್‌ಗೆ ಕೊಟ್ಟಿರುವ ಸಾಲ 13.64 ಲಕ್ಷ ಸೇರಿದಂತೆ ಒಟ್ಟು 1.51 ಕೋಟಿ ಸಾಲ ಮರಳಿ ಬರಬೇಕಿದೆ. ಇದೆಲ್ಲವೂ ಅವರ ಕುಟುಂಬಸ್ಥರಿಗೆ ನೀಡಿರುವ ಸಾಲವಾಗಿದೆ. ಪುತ್ರ ಪ್ರಶಾಂತ ಶೆಟ್ಟರ್‌ಗೆ 52.85 ಲಕ್ಷ, ಇನ್ನೊಬ್ಬ ಪುತ್ರ ಸಂಕಲ್ಪ ಶೆಟ್ಟರ್‌ಗೆ 50.11 ಲಕ್ಷ, ಸಹೋದರ ಮೋಹನ್ ಶೆಟ್ಟರ್‌ಗೆ 35.25 ಲಕ್ಷ ಸಾಲವನ್ನು ಶೆಟ್ಟರ್‌ ನೀಡಿದ್ದಾರೆ. ಇನ್ನು ಇವರ ಪತ್ನಿ ಶಿಲ್ಪಾ ಶೆಟ್ಟರ್‌ ತಮ್ಮ ಪುತ್ರ ಪ್ರಶಾಂತ ಶೆಟ್ಟರ್‌ಗೆ 4.80 ಲಕ್ಷ, ಇನ್ನೊಬ್ಬ ಪುತ್ರ ಸಂಕಲ್ಪಗೆ 20 ಸಾವಿರ ಸಾಲ ಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement