ಎಚ್.ಡಿ.ಮಾರಸ್ವಾಮಿ, 
ರಾಜಕೀಯ

ಅಂಬರೀಶ್ ಜೆಡಿಎಸ್ ಸೇರುವುದಾದರೆ ಅವರಿಗೆ ಸ್ವಾಗತ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಸಚಿವ, ನಟ ಅಂಬರೀಶ್ ಜೆಡಿಎಸ್ ಗೆ ಬರುವುದೆಂದಾದರೆ ಅವರಿಗೆ ಆತ್ಮೀಯ ಸ್ವಾಗತವಿದೆ" ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ: "ಮಾಜಿ ಸಚಿವ, ನಟ ಅಂಬರೀಶ್ ಜೆಡಿಎಸ್ ಗೆ ಬರುವುದೆಂದಾದರೆ ಅವರಿಗೆ ಆತ್ಮೀಯ ಸ್ವಾಗತವಿದೆ" ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮದ್ದೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ್ದ ಕುಮಾರಸ್ವಾಮಿ "ಅಂಬರಿಶ್ ಗೆ ಪಕ್ಷಕ್ಕೆ ಸೇರ್ಪಡೆಯಾಗುವ ಇಚ್ಚೆ ಇದ್ದಲ್ಲಿ ನಾವು ಅವರನ್ನು ಸ್ವಾಗತಿಸಲು ಸಿದ್ದರಿದೇವೆ. ಅಗತ್ಯವಾದಲ್ಲಿ ಅವರ ಮನೆಗೆ ತೆರಳಿ ಭೇಟಿಯಾಗುತ್ತೇನೆ." ಎಂದರು.
"ಅಂಬರೀಶ್ ತಾವೆಲ್ಲಿಯೂ ಜೆಡಿಎಸ್ ಸೇರ್ಪಡೆಯಾಗುತ್ತೇನೆಂದು ಹೇಳಿಲ್ಲ. ಆರೋಗ್ಯ ಸಮಸ್ಯೆ ಇರುವ ಕಾರಣ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಅವರು ದೇವೇಗೌಡರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದದ್ದಾರೆ"
ಅಂಬರೀಶ್ ಪಕ್ಷ ಸೇರ್ಪಡೆಗೆ ಆಸಕ್ತರಾಗಿದ್ದರೆ ಅವರಿಗೆ ಸ್ವಾಗತವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕಲ್ಪನಾ ಸಿದ್ದರಾಜು ಅವರೊಡನೆ ಮಾತುಕತೆಗಾಗಿ ಮದ್ದೂರಿಗೆ ಆಗಮಿಸಿದ್ದ ಕುಮಾರಸ್ವಾಮಿ ಮಾದ್ಯಮದವರೊಂದಿಗೆ ಮಾತನಾಡಿದ್ದಾರೆ.
ಕಲ್ಪನಾ ಸಿದ್ದರಾಜು ಕೆಲ ಸಮಯದಿಂದ ಪಕ್ಷ  ಚಟುವಟಿಕೆಗಳಿಂದ ದೂರವಿದ್ದರು. ಆದರೆ ಈಗ ಮತ್ತೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಪಕ್ಷ ಉತ್ತಮ ಸ್ಥಾನ ಮಾನವನ್ನು ನಿಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!