ಸುನೀಲ್ ಕುಮಾರ್, ಯು.ಟಿ ಖಾದರ್ ಮತ್ತು ಆನಂದ್ ಆಸ್ವೋಟಿಕರ್ 
ರಾಜಕೀಯ

ಕಡಲ ಕಿನಾರೆ ರಾಜಕೀಯ: ಮತದಾರರಿಗೆ ನಾಯಕರುಗಳ ಭರವಸೆಗಳೇನು?

ಕಾರವಾರ, ಕಾರ್ಕಳ ಹಾಗೂ ಮಂಗಳೂರುಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಕಾಂಗ್ರೆಸ್ ಸಿದ್ಧತೆಯಲ್ಲಿದೆ, ಹಿಂದುತ್ವ ಅಜೆಂಡಾ...

ಕಾರವಾರ/ ಕಾರ್ಕಳ/ ಮಂಗಳೂರು: ಕಡಲ ಕಿನಾರೆ ಜಿಲ್ಲೆಗಳಾದ ಕಾರವಾರ, ಕಾರ್ಕಳ ಹಾಗೂ ಮಂಗಳೂರುಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಕಾಂಗ್ರೆಸ್ ಸಿದ್ಧತೆಯಲ್ಲಿದೆ, ಹಿಂದುತ್ವ ಅಜೆಂಡಾ ಮುಂದಿಟ್ಟುಕೊಂಡು ಬಿಜೆಪಿ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ, ಜೆಡಿಎಸ್ ಸರಳವಾಗಿ ತನ್ನ ದಾರಿಯಲ್ಲಿ ನಡೆಯುತ್ತಿದೆ.
ಕರಾವಳಿ ಕರ್ನಾಟಕ ಒಟ್ಟು 19 ಕ್ಷೇತ್ರಗಳಿದ್ದು, ಕಾಂಗ್ರೆಸ್-13, ಬಿಜೆಪಿ-3 ಹಾಗೂ3 ರಲ್ಲಿ ಸ್ವತಂತ್ರ್ಯ ಅಭ್ಯರ್ಥಿಗಳು ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇಲ್ಲಿನ ಜನತೆ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ, ಕುಡಿಯುವ ನೀರು, ನೀರಾವರಿಸ ರಸ್ತೆ, ಹಾಗೂ ಮೀನುಗಾರಿಕೆಗೆ ಉತ್ತಮ ನೀತಿ ನಿಯಮಗಳಿಗಾಗಿ ಪರದಾಡುತ್ತಿದ್ದಾರೆ.ಮೇ 12 ರಂದು ನಡೆಯುವ ವಿಧಾನಸಭೆ ಚುನಾವಣೆ ಬಗ್ಗೆ ರಾಜಕಾರಣಿಗಳ ಅಜೆಂಡಾ ಹಾಗೂ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಕ್ಷೇತ್ರಗಳ ಜನತೆ ತಮ್ಮ ನಾಯಕರ ಬಗ್ಗೆ ಏನು ಹೇಳುತ್ತಾರೆ ಎಂಬ ಬಗ್ಗೆ ವಿವರಣೆ ಇಲ್ಲಿದೆ.
ಸುನೀಲ್ ಕುಮಾರ್: ಕಾರ್ಕಳ-ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ
ಬಿಜೆಪಿಗೆ ಹಿಂದುತ್ವ ಪ್ರಮುಖ ಅಜೆಂಡಾವಾಗಿದೆ, ಸಿದ್ದರಾಮಯ್ಯ ಸರ್ಕಾರದ 5 ವರ್ಷಗಳ ಆಡಳಿತಾವಧಿಯಲ್ಲಿ ನಮ್ಮ ಹಲವು ಕಾರ್ಯಕರ್ತರ ಮೇಲೆ ಆಕ್ರಮಣ ನಡೆದಿದೆ. ಗೋಸಾಗಣೆ ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ನಡೆಯುತ್ತಿದೆ. ಸರ್ಕಾರ ನಮ್ಮ ದೇವಾಲಯಗಳು ಹಾಗೂ ಮಠಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ. ಇದಕ್ಕೆಲ್ಲಾ ಈ ಬಾರಿಯ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ. 
ಕಳೆದ 5 ವರ್ಷಗಳಿಂದ ವಿರೋಧ ಪಶ್ರದ ಶಾಸಕರಾಗಿ ಕೆಲಸ ಮಾಡಿರುವ ಸುನೀಲ್ ಕುಮಾರ್  ಹಿಂದುತ್ವದ ಫೈರ್ ಬ್ರ್ಯಾಂಡ್ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ನಮಗೆ ಅಭಿವೃದ್ಧಿಯಷ್ಟೇ ಮುಖ್ಯ, ನಾವು 37 ಸೇತುವೆಗಳನ್ನು 57 ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ, ಕಳೆದ 5 ವರ್ಷಗಳಲ್ಲಿ 3 ಸಾವಿರ ಜನರಿಗೆ ಬೆಳೆ ಬೆಳೆಯಲು ಭೂಮಿ ಬಾಡಿಗೆ ನೀಡಿದ್ದೇವೆ, ಸ್ಥಳೀಯ ಮಟ್ಟದಲ್ಲಿ ಎಲ್ಲೂ ನನ್ನ ವಿರೋಧಿ ಅಲೆ ಇಲ್ಲ, ಈಗ ಆಡಳಿತದಲ್ಲಿರುವ ಸರ್ಕಾರದಿಂದ ಹಿಂದೂಗಳು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಹೇಳಿರುವ ಸುನೀಲ್ ಕುಮಾರ್ ಈ ಕ್ಷೇತ್ರಕ್ಕೆ ಪ್ರತ್ಯೇಕ ಮರಳು ಗಣಿಗಾರಿಕಾ ನೀತಿ ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಯು.ಟಿ ಖಾದರ್, ಕಾಂಗ್ರೆಸ್ ಶಾಸಕ- ದಕ್ಷಿಣ ಕನ್ನಡ
ಕಳೆದ ತಿಂಗಳು ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸಂದೇಶಗಳು ಶಾಸಕ ಯು.ಟಿ ಖಾದರ್ ಅವರಿಗೆ ಸವಾಲಾಗಿದೆ, ಈ ಸಂದೇಶಗಳು ನಮ್ಮ ಅಭಿವೃದ್ಧಿ ಕೆಲಸಗಳಿದ ಜನರನ್ನು ವಿಮುಖರನ್ನಾಗಿಸಿ ಹಿಂದೂತ್ವದ ಕಡೆಗೆ ಅವರ ಗಮನವನ್ನು ಸೆಳೆಯುವುದಾಗಿದೆ. ಇದನ್ನು ತಡೆದು, ಸರ್ಕಾರದ ಸಾಧನೆಗಳ ಬಗ್ಗೆ ಹೈಲೈಟ್ ಮಾಡುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಕೋಮು ಗಲಭೆ, ಹಿಂಸಾಚಾರ ದಕ್ಷಿಣ ಕನ್ನಡದಲ್ಲಿ ನಡೆದ ದೀಪಕ್ ರಾವ್ ಮತ್ತು ಬಶೀರ್ ಕೊಲೆ ಪ್ರಕರಣಗಳು ಕರಾವಳಿ ಕರ್ನಾಟಕವನ್ನು ಬೆಂಕಿಯಲ್ಲಿ ಬೇಯಿಸುತ್ತಿವೆ. ಎಲ್ಲಾ ಕಾಂಗ್ರೆಸ್ ಶಾಸಕರು ಎದುರಿಸುತ್ತಿರುವಂತೆಯೇ ಯು ಟಿ ಖಾದರ್ ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ, ಹಿಂದುತ್ವವನ್ನು ಯಾರು ವಿರೋಧಿಸುವುದಿಲ್ಲ, ಆದರೆ ಅದು ಯಾವ ರೀತಿಯ ಹಿಂದುತ್ವ ವಾಗಬೇಕು ಎಂದು ಪ್ರಶ್ನಿಸಿದ್ದಾರೆ, ನಾವು ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮ ಗಾಂಧಿ ಅವರ ಹಿಂದುತ್ವ ವನ್ನು ಒಪ್ಪಿಕೊಳ್ಳುತ್ತೇವೆ, ಆಧರೆ ಇವರು ನಡೆಸುತ್ತಿರುವುದು ರಾಜಕೀಯ ಲಾಭಕ್ಕಾಗಿ ಎಂದು ಆರೋಪಿಸಿದ್ದಾರೆ.
ನಮ್ಮ ಸರ್ಕಾರ ಹಲವು ಜನ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದೆ, ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆನೆದು ಜನರು ನನಗೆ ಅಧಿಕಾರ ತಂದುಕೊಡುತ್ತಾರೆ. ದಕ್ಷಿಣ ಕನ್ನಡ ಜನ ತುಂಬಾ ಬುದ್ದಿವಂತರು. ಅವರಿಗೆ ಅಭಿವೃದ್ಧಿ ಮತ್ತು ವಿಭಜನೆ ಬಗ್ಗೆ ಅರ್ಥ ತಿಳಿದಿದೆ ಎಂದು ಖಾದರ್ ಭರವಸೆ ವ್ಯಕ್ತ ಪಡಿಸಿದ್ದಾರೆ.
ಆನಂದ್ ಅಸ್ನೋಟಿಕರ್, ಜೆಡಿಎಸ್ - ಉತ್ತರ ಕನ್ನಡ
ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿದ್ದ ಆನಂದ್ ಅಸ್ವೋಟಿಕರ್ ಜನಪ್ರಿಯ ಮುಖ, ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಮೂಲಕ ಮತ್ತಷ್ಟು ಚಿರಪರಿಚಿತರಾಗುತ್ತಿದ್ದಾರೆ, ಕರಾವಳಿ ತೀರದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿಲ್ಲ  ಆದರೆ ಆನಂದ್ ಅಸ್ನೋಟಿಕರ್, ಇಲ್ಲಿನ ಮತದಾರರಿಗೆ ಪರಿಚಿತರು, ಉತ್ತರ ಕನ್ನಡದಲ್ಲಿ ನೀರು, ನೀರಾವರಿ, ಸಮಸ್ಯೆಗಳಿದ್ದು ಕೈಗಾರಿಕೋದ್ಯಮದಲ್ಲೂ ಹಿಂದೆ ಬಿದ್ದಿದೆ,ಖಾಸಗಿ ಅಥವಾ ಸರ್ಕಾರಿ ನೌಕರಿಗಳನ್ನು ಇಲ್ಲಿನ ಜನರು ಅವಲಂಭಿಸಿದ್ದಾರೆ,  ಸರಿಯಾದ ನೀರಾವರಿ ಯೋಜನೆಗಳಿಲ್ಲದ ಕಾರಣ ಕೃಷಿ ಮಾಡುವುದರಿಂದ ಜನರು ದೂರ ಉಳಿದಿದ್ದಾರೆ.
ಹೆಚ್ಚಿನ ಬಡತನ ಹಾಗೂ ತಲಾದಾಯ ಕಡಿಮೆ, ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳು ಬರುವುದನ್ನು  ನಾವು ನಿರೀಕ್ಷಿಸುತ್ತಿದ್ದೇವೆ, ಇದರಿಂದ ಯುವಕರಿಗೆ ಉದ್ಯೋಗ ಸಿಗುವ ಸಾಧ್ಯತೆಗಳು ಹೆಚ್ಚು ಸಿಗುತ್ತವೆ. ಇಲ್ಲಿನ ಮೀನುಗಾರರು ಪಕ್ಕದ ಉಡುಪಿ ಮತ್ತು ದಕ್ಷಿಣ ಕನ್ನಡದ ಮೀನುಗಾರರ ಜೊತೆ ಸ್ಪರ್ದಿಸಲು ಸಾಧ್ಯವಾಗುತ್ತಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ಟೋಟಿಕರ್ ಹೇಳಿದ್ದಾರೆ. ಆರ್ ವಿ ದೇಶಪಾಂಡೆ ಕೈಗಾರಿಕಾ ಸಚಿವರರಾಗಿದ್ದರು ಉತ್ತರ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ, ಹೀಗಾಗಿ ಆಸ್ಪತ್ರೆ, ಕುಡಿಯುವ ನೀರು, ನೀರಾವರಿ ಮತ್ತು ಕೈಗಾರಿಕೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT