ರಾಜಕೀಯ

ಅಪಘಾತ ದುರ್ಘಟನೆ ಬಳಿಕವು ಮೋದಿ ಕಾರ್ಯಕ್ರಮ ನಿಲ್ಲಿಸದ ಬಿಜೆಪಿ: ಪ್ರಮೋದ್ ಮಧ್ವರಾಜ್ ಕಿಡಿ

Manjula VN
ಉಡುಪಿ; ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಾವೇಶಕ್ಕಾಗಿ ಪೆಂಡಾಲ್ ಸಾಮಾನುಗಳನ್ನು ಸಾಗಿಸುತ್ತಿದ್ದ ಟೆಂಪೋ ಅಪಘಾತಕ್ಕೀಡಾಗಿ ಮೂವರು ಕಾರ್ಮಿಕರು ಸಾವಿಗೀಡಾದರೂ ಬಿಜೆಪಿ ನಾಯಕರು ಕಾರ್ಯಕ್ರಮವನ್ನು ನಿಲ್ಲಿಸದಿರುವುದಕ್ಕೆ ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ವಿರುದ್ಧ ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಮೋದಿಯವರ ಸಮಾವೇಶಕ್ಕಾಗಿ ಪೆಂಡಾಲ್ ಸಾಮಾನುಗಳನ್ನು ಸಾಗಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. 
ಉಡುಪಿಯಲ್ಲಿ ಮೇ.1 ರಂದು ನಡೆಯಲಿರುವ ಮೋದಿ ಪಾಲ್ಗೊಳ್ಳುವ ಬಿಜೆಪಿ ಸಮಾವೇಶಕ್ಕೆ ಈ ಪೆಂಡಾಲ್ ಸಾಮಾಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಚಿತ್ರದುರ್ಗದಿಂದ ಉಡುಪಿಗೆ ಪೆಂಡಾಲ್ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದಾಗ ಪೆರ್ಡೂರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಸ್ಕಿಡ್ ಆಗಿ ದುರ್ಘಟನೆ ಸಂಭವಿಸಿತ್ತು. 
ಘಟನೆ ಕುರಿತಂತೆ ತೀವ್ರ ಸಂತಾಪ ಸೂಚಿಸಿರುವ ಪ್ರಮೋದ್ ಮಧ್ವರಾಜ್ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಾಗಿದ್ದರೆ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ದುರ್ಘಟನೆ ಬಳಿಕವೂ ಬಿಜೆಪಿ ತನ್ನ ಕಾರ್ಯಕ್ರಮವನ್ನು ಮುಂದುವರೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ತಿಳಿಸಿದ್ದಾರೆ. 
SCROLL FOR NEXT