ಬೆಂಗಳೂರು: ಕೊಡಗು ಭೇಟಿ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತರಾಮನ್ ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್ ಮೇಲೆ ಸಿಡಿಮಿಡಿಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಕೊಡಗು ಜಿಲ್ಲೆಯ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಬದಲು ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಅಧಿಕಾರ ಚಲಾಯಿಸುವುದು ಹೆಚ್ಚು ಮುಖ್ಯವಾದಂತೆ ಕಂಡುಬಂತು. ಇದರಿಂದ ಬಿಜೆಪಿಗೆ ಕರ್ನಾಟಕದ ಬಗ್ಗೆ ಯಾವ ಮನೋಭಾವವಿದೆ ಎಂದು ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಬಗ್ಗೆ ಅಸಡ್ಡೆ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಸ್ಥಿತಿಗತಿ ಬಗ್ಗೆ ರಕ್ಷಣಾ ಸಚಿವೆಯನ್ನು ಕಳುಹಿಸುವ ಬದಲು ಖುದ್ದು ಪ್ರಧಾನಿಯವರೇ ಬಂದು ವೀಕ್ಷಿಸಬೇಕಾಗಿತ್ತು. ಕೇರಳಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ ಪರಿಹಾರ ವೀಕ್ಷಣೆ ಮಾಡಿದವರು ಇಲ್ಲಿಗೇಕೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
I condemn the stepmotherly treatment by @PMOIndia in releasing relief funds. We expected PM @narendramodi to assess the loss instead it was delegated to @DefenceMinIndia, who was more interested in dominating our state minister. This reflects @BJP4India 's apathy towards Ktaka.