ಸಂಗ್ರಹ ಚಿತ್ರ 
ರಾಜಕೀಯ

ಷರಬತ್ತು ಕುಡಿಸಿದವರೆಲ್ಲಾ ಲೀಡರ್ ಆಗಲ್ಲ: ಡಿಕೆಶಿಗೆ ಸತೀಶ್ ಜಾರಕಿ ಹೊಳಿ ಟಾಂಗ್

ಸಚಿವ ಡಿಕೆ ಶಿವಕುಮಾರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಮುಸುಕಿನ ಗುದ್ದಾಟ ಮತ್ತೆ ಮುಂದುವರೆದಿದ್ದು, 'ಷರಬತ್ತು ಕುಡಿಸಿದವರೆಲ್ಲಾ ಲೀಡರ್ ಆಗಲ್ಲ ಎಂದು ಸತೀಶ್ ಜಾರಕಿ ಹೊಳಿ ಟಾಂಗ್ ನೀಡಿದ್ದಾರೆ.

ಬೆಳಗಾವಿ: ಸಚಿವ ಡಿಕೆ ಶಿವಕುಮಾರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಮುಸುಕಿನ ಗುದ್ದಾಟ ಮತ್ತೆ ಮುಂದುವರೆದಿದ್ದು, 'ಷರಬತ್ತು ಕುಡಿಸಿದವರೆಲ್ಲಾ ಲೀಡರ್ ಆಗಲ್ಲ ಎಂದು ಸತೀಶ್ ಜಾರಕಿ ಹೊಳಿ ಟಾಂಗ್ ನೀಡಿದ್ದಾರೆ.
ಜಾರಕಿಹೊಳಿ ಬ್ರದರ್ಸ್ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ನಡುವಿನ ಶೀತಲ ಸಮರ ಹಳೆ ಸುದ್ದಿ. ಆದರೆ ಈ ಬಾರಿ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಜಾರಕಿಹೊಳಿ ವಿರುದ್ಧವೇ ಗರಂ ಆಗಿದ್ದಾರೆ. ಸತೀಶ ಜಾರಕಿಹೊಳಿ ಇದೇ ಮೊದಲ ಬಾರಿಗೆ ಸೋದರ ರಮೇಶ ಜಾರಕಿಹೊಳಿ ಸಚಿವ ಸ್ಥಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿಕೆಶಿ, ಈ ಮೂವರ ಹಳೇ ವ್ಯವಹಾರ ನನಗೆ ಗೊತ್ತಿಲ್ಲ. ಇವರ ನಡುವೆ ಯಾವುದಾದರೂ ವ್ಯವಹಾರ ಇರಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮುಂದುವರಿದು ಇವರೆಲ್ಲಾ ಒಂದೇ ಪರಿವಾರ ಇದ್ದಂತೆ, ಅವರ ಪರಿವಾರ ಒಡೆಯುವ ಕೆಲಸ ನಾನು ಮಾಡಿಲ್ಲ. ಅಂತೆಯೇ ಡಿಕೆಶಿ ಹಾಗೂ‌ ರಮೇಶ್ ಮುನಿಸಿಗೂ ಪಿಎಲ್ ಡಿ ಬ್ಯಾಂಕ್ ಚುನಾವಣೆ ಕಾರಣ ಅಲ್ಲ ಎಂದರು. ಇದೇ ವೇಳೆ 
ಪ್ರತಿಭಟನಾ ನಿರತ ರೈತರನ್ನು ಮನವೊಲಿಸುವ ಮೂಲಕ ಧರಣಿ ನಿಲ್ಲಿಸಿದ್ದ ಕುರಿತು ವ್ಯಂಗ್ಯವಾಡಿದ ಸತೀಶ್. 'ಯಾರೋ ಒಬ್ಬರು ಬಂದು ಷರಬತ್ ಕುಡಿಸಿ ಲೀಡರ್ ಆಗೋಕೆ‌ ಆಗಲ್ಲ. ಅವರು ಅವರ ಡ್ಯೂಟಿ ಮಾಡಿದ್ದಾರೆ ಅಷ್ಟೆ ಎಂದು ಟಾಂಗ್ ಕೊಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT