ಮಲ್ಲಿಕಾರ್ಜುನ ಖರ್ಗೆ 
ರಾಜಕೀಯ

ಈಡೇರದ ರಾಜ್ಯ ಕಾಂಗ್ರೆಸ್ ನಾಯಕರ ಭರವಸೆ: ಸಚಿವಾಕಾಂಕ್ಷಿಗಳಿಂದ ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ನಿರ್ಧಾರ !

ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡುವುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ನೀಡಿರುವ ಆಶ್ವಾಸನೆಯನ್ನು ನಂಬದ ಸಚಿವಾಕಾಂಕ್ಷಿಗಳು ಕಾಂಗ್ರೆಸ್ ಹಿರಿಯ ...

ಬೆಂಗಳೂರು/ಹುಬ್ಬಳ್ಳಿ: ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡುವುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ನೀಡಿರುವ ಆಶ್ವಾಸನೆಯನ್ನು ನಂಬದ ಸಚಿವಾಕಾಂಕ್ಷಿಗಳು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ನಿರ್ಧರಿಸಿರುವ ಸಚಿವಕಾಂಕ್ಷಿಗಳು ಡಿಸೆಂಬರ್ 10ರೊಳಗೆ ಸಂಪುಟ ವಿಸ್ತರಣೆ ಮಾಡುವಂತೆ ಹೈ ಕಮಾಂಡ್ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಡಿಸೆಂಬರ್ 10 ರೊಳಗೆ ಸಂಪುಟ ವಿಸ್ತರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರ ಮಾತಿನ ಮೇಲೆ ವಿಶ್ವಾಸ ಕಳೆದುಕೊಂಡಿರುವ ಸಚಿವಾಕಾಂಕ್ಷಿಗಳು, ಡಿಸೆಂಬರ್ 5 ರಂದು ಖರ್ಗೆ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಸಂಪುಟ ವಿಸ್ತರಣೆ ಮಾಡುವುದಾಗಿ ರಾಜ್ಯ ನಾಯಕರು ಇದುವರೆಗೂ ನೀಡಿರುವ ಆಶ್ವಾಸನೆ ಇದುವರೆಗೂ ಈಡೇರಿಲ್ಲ,ಕಳೆದ ಆರು ತಿಂಗಳಿಂದ ಇದೇ ರೀತಿಯ ಭರವಸೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ,.ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ, ಹೀಗಾಗಿ  ಡಿಸೆಂಬರ್ 7 ರ ನಂತರ ರಾಹುಲ್ ಗಾಂಧಿ ಫ್ರೀ ಆಗಲಿದ್ದಾರೆ, ಹೀಗಾಗಿ ಡಿಸೆಂಬರ್ 10 ರೊಳಗೆ ಸಂಪುಟ ವಿಸ್ತರಣೆ ಆಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!

ChatGPT ತಂದ ಸಾವು: "ಏನಾಗಲ್ಲ, ಈ ಮಿಶ್ರಣ ಸೇವಿಸು" ಎಂದಿದ್ದ OpenAI; ಮಾತು ನಂಬಿದ 19 ವರ್ಷದ ಯುವಕ ಸಾವು; ತಾಯಿಯ ರೋಧನೆ!

Friendship Cup ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ; Sarpanch Saab ಮಾಡಿದ್ದೇನು?