ರಾಜಕೀಯ

ಗೃಹ ಖಾತೆ ಕಿತ್ತುಕೊಂಡಿದ್ದು ಸರಿಯಲ್ಲ: ಪರಂ ಪರ ರೇವಣ್ಣ ಬ್ಯಾಟಿಂಗ್

Lingaraj Badiger
ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಂದ ಗೃಹ ಖಾತೆಯನ್ನು ವಾಪಸ್ ಪಡೆದದ್ದು ಸರಿಯಲ್ಲ ಎಂದು ಶುಕ್ರವಾರ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ 'ಗೃಹ ಖಾತೆಯನ್ನು ಪರಮೇಶ್ವರ್‌ ಅವರ ಬಳಿಯಿಂದ ವಾಪಾಸ್‌ ಪಡೆದಿದ್ದು ಸರಿಯಲ್ಲ. ಅವರು ದಲಿತ ನಾಯಕ. ಪರಿಶಿಷ್ಟ ಜಾತಿಯವರು ಡಿಸಿಎಂ ಆಗಿರುವುದು ಕಾಂಗ್ರೆಸ್‌ ನಾಯಕರಿಗೇ ಸಹಿಸಲು ಆಗುತ್ತಿಲ್ಲ' ಎಂದು ಕಾರಿದರು.
ಇದೇ ವೇಳೆ ಗೃಹ ಇಲಾಖೆ ವರ್ಗಾವಣೆ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದು ರೇವಣ್ಣ ಅವರು, ಈ ರೀತಿ ಆರೋಪ ಮಾಡಿಯೇ ಕಾಂಗ್ರೆಸ್‌ ನಾಯಕರು ಈ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್‌ ನಾಯಕರು ಹೀಗೆ ಸಂಚು ಮಾಡಲು ಹೋದರೆ ಏಟು ತಿನ್ನುವ ಕಾಲ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಪರಮೇಶ್ವರ್ ಡಿಸಿಎಂ ಇದ್ದಾರೆ. ಹಾಗಾಗಿ ಗೃಹ ಖಾತೆ ಅವರಲ್ಲೇ ಇರಬೇಕಿತ್ತು. ಗೃಹ ಖಾತೆ ಅವರಿಂದ ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ. ಆದರೂ ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೆ, ನಾನೆಂದು ನನ್ನ ಇಲಾಖೆ ಬಿಟ್ಟು ಅವರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.
SCROLL FOR NEXT