ಬೀದರ್ ನ ಅನುಭವ ಮಂಟಪದಲ್ಲಿ ರಾಹುಲ್ ಗಾಂಧಿ
ಕಲಬುರಗಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 4 ದಿನಗಳ ರಾಜ್ಯ ಪ್ರವಾಸ ಮಂಗಳವಾರ ಅಂತ್ಯಗೊಂಡಿದೆ. ರಾಹುಲ್ ಆಗಮನದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ಹುರುಪು ಮೂಡಿದೆ. ಇನ್ನೂ ಸಿದ್ದರಾಮಯ್ಯ ಕೂಡ ತಿಂಗಳುಗಳ ಕಾಲ ರಾಜ್ಯಾದ್ಯಂತ ದೀರ್ಘ ಪ್ರವಾಸ ಕೈಗೊಳ್ಳಲಿದ್ದಾರೆ.
ವಿವಿಧ ಅಭಿವೃದ್ಧ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ಮಾಡಲು ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಕ್ಷವನ್ನು ಬಲಪಡಿಸಲು ಹಾಗೂ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ.
ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಜಯ ಸಾಧಿಸಲು ಪಕ್ಷ ಸಿದ್ಧತೆ ನಡೆಸುತ್ತಿದೆ, ಬೇರೆ ಪಕ್ಷದಿಂದ ವಲಸೆ ಬರುತ್ತಿರುವ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಷಯ ಸೇರಿದಂತೆ ಹಲವು ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳಲು ಸಿಎಂಗೆ ಅವಕಾಶ ನೀಡಲಾಗಿದೆ.
ಪಕ್ಷದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ರಾಹುಲ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಹೈದ್ರಾಬಾದ್ ಕರ್ನಾಟಕದ ಯಾವುದೇ ಪ್ರದೇಶಗಳಿಗೆ ಭೇಟಿ ನೀಡಿದಾಗಲೂ ರಾಹುಲ್ ಗಾಂಧಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.ಇದು ಪಕ್ಷಕ್ಕಿರುವ ತಳಮಟ್ಟದ ಬೆಂಬಲ ತೋರಿಸಿದೆ, ಆದರೆ ಈ ಬೆಂಬಲ ಚುನಾವಣೆ ಮುಗಿಯುವವರೆಗೂ ಇರುತ್ತದೇಯೇ ಕಾದು ನೋಡಬೇಕು.
ತಮ್ಮ ತಮ್ಮ ಪ್ರದೇಶದಲ್ಲಿ ತಮ್ಮ ಪ್ರಬಲ ನಾಯಕತ್ವವನ್ನು ತೋರ್ಪಡಿಸಲು ಪಕ್ಷದ ಹಲವು ಮುಖಂಡರು ಸಾಕಷ್ಟು ಹರಸಾಹಸ ನಡೆಸಿದ್ದಾರೆ. ರಾಹುಲ್ ಗಾಂಧಿ ಆಗಮನ ಸಾಕಷ್ಟು ಉತ್ಸಾಹ ಮೂಡಿಸಿದರೂ ಅವರ ನಾಯಕತ್ವದಲ್ಲಿ ಚುನಾವಣೆ ಗೆಲ್ಲುವ ಆತ್ಮ ವಿಶ್ವಾಸ ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರಿಗಿಲ್ಲ, ಏಕೆಂದರೆ ಇತ್ತೀಚೆಗೆ ನಡೆದ ಹಲವು ಸಾರ್ವಜನಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರುವುದು ಮುಖಂಡರ ಅವಿಶ್ವಾಸಕ್ಕೆ ಕಾರಣವಾಗಿದೆ.
ಆದರೆ ಸಿದ್ದರಾಮಯ್ಯ ವಿಷಯದಲ್ಲಿ ಈ ನಾಯಕರ ಗ್ರಹಿಕೆ ವಿರುದ್ಧವಾಗಿದೆ. ರಾಹುಲ್ ಗಾಂಧಿ ಮತ್ತು ಇತರೆ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಹೆಸರನನ್ನು ಕರೆದಾಗ ಮಾತ್ರ ಜೋರಾಗಿ ಘೋ,ಷಣೆ ಹಾಕುತ್ತಿದ್ದರು. ಗುಜರಾತ್ ಚುನಾವಣೆ ಸೋಲು ಕಾಂಗ್ರೆಸ್ ತಕ್ಕಮಟ್ಟಿಗೆ ಹಿಂದು ಮತಗಳ ಬಗ್ಗೆ ಮೃಧು ಧೋರಣೆ ತಳೆಯುವಂತೆ ಮಾಡಿದೆ.
ಹಿಂಧೂಗಳ ಮತಗಳನ್ನು ಸಲುವಾಗಿ, ರಾಹುಲ್ ಗಾಂಧಿ, ಹೊಸಪೇಟೆ ಸಮೀಪದ ಹುಲಿಗೆಮ್ಮ ದೇವಾಲಯ, ಕೊಪ್ಪಳದ ಗವಿ ಸಿದ್ದೇಶ್ವರ ಮಠ, ಕನಕಗಿರಿಯ ಶರಣ ಬಸವೇಶ್ವರ ದೇವಾಲಯ ಭೇಟಿ ರಾಹುಲ್ ಮನಸ್ಸಿನ ಹಿಂದುತ್ವ ರಾಜಕೀಯಕ್ಕೆ ಹಿಡಿದ ಕನ್ನಡಿಯಾಗಿದೆ.ಇನ್ನೂ ರಾಹುಲ್ ಗಾಂಧಿ ದೇವಾಲಯಗಳ ಭೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಹುಲ್ ರನ್ನು ಚುನಾವಣೆ ಹಿಂದೂ ಎಂದು ಛೇಡಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos