ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿರುವ ಕಾಂಗ್ರೆಸ್, ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚುನಾವಣಾ ಸಮಿತಿ ರಚನೆ ಮಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಒಪ್ಪಿಗೆ ನೀಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಒಟ್ಟು 43 ಸದಸ್ಯರ ಚುನಾವಣಾ ಸಮಿತಿ ರಚನೆಗೆ ರಾಹುಲ್ ಗಾಂಧಿ ಒಪ್ಪಿದೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಸಮಿತಿಯಲ್ಲಿ ಆಸ್ಕರ್ ಫರ್ನಾಂಡೀಸ್, ಎಸ್.ಆರ್ ಪಾಟೀಲ್, ದಿನೇಶ್ ಗುಂಡೂರಾವ್, ಡಿ.ಕೆ. ಶಿವಕುಮಾರ್, ವೀರಪ್ಪ ಮೊಯ್ಲಿ, ಬಿ.ಕೆ ಹರಿಪ್ರಸಾದ್, ಮುನಿಯಪ್ಪ, ಮಾರ್ಗರೇಟ...ಆಳ್ವಾ, ಅಲ್ಲಂ ವೀರಭದ್ರಪ್ಪ, ಆರ್.ವಿ.ದೇಶಪಾಂಡೆ, ರೆಹಮಾನ್ ಖಾನ್, ಹೆಚ್.ಕೆ ಪಾಟೀಲ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ರಮಾನಾಥ ರೈ, ಮಹದೇವಪ್ಪ, ಎಂ.ಬಿ. ಪಾಟೀಲ್. ಎಂ. ಕೃಷ್ಣಪ್ಪ, ಬಿ.ಎಲ್ ಶಂಕರ್, ಸಿ.ಎಂ. ಇಬ್ರಾಹಿಂ, ಮೋಟಮ್ಮ, ಸತೀಶ ಜಾರಕಿಹೊಳಿ, ರಾಣಿ ಸತೀಶ್, ಸಿ.ಎಸ್.ನಾಡಗೌಡ, ವಿನಯ್ ಕುಮಾರ್ ಸೊರಕೆ, ಕೃಷ್ಣಬೈರೇಗೌಡ, ಎಸ್.ಎಸ್. ಮಲ್ಲಿಕಾರ್ಜುನ್, ಸಂತೋಷ್ ಲಾಡ್, ಪಿ.ಟಿ.ಪರಮೇಶ್ವರ ನಾಯಕ್, ಶಿವರಾಜ್ ತಂಗಡಗಿ, ರೋಷನ್ ಬೇಕ್, ಅಂಬರೀಶ್, ಉಮಾಶ್ರೀ, ಕೆ.ಬಿ. ಕೃಷ್ಣಮೂರ್ತಿ, ಸಲೀಮ್ ಅಹ್ಮದ್, ನರಸಿಂಗ್ ರಾವ್ ಸೂರ್ಯವಂಶಿ, ಬಸನಗೌಡ ಬಾದರ್ಲಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ಯಾರೇಜಾನ್, ಹೆಚ್.ಎಸ್ ಮುಂಜುನಾಥ್ ಇದ್ದಾರೆ.
ಚುನಾವಣಾ ಸಮಿತಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಎಲ್ಲಾ ಸಂಸದರಿಗೂ ಸ್ಥಾನವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.