ರಾಜಕೀಯ

ಸಿಎಂಗಳ ಟ್ವೀಟ್‌ ವಾರ್‌ ವೈರಲ್: ಯೋಗಿ ಕರ್ನಾಟಕದಿಂದ ಕಲಿಯಲಿ ಎಂದ ಸಿದ್ದರಾಮಯ್ಯ

Lingaraj Badiger
ಬೆಂಗಳೂರು: ಅಭಿವೃದ್ಧಿ ಮತ್ತು ಆಡಳಿತ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ನಡೆದ ಟ್ವೀಟ್‌ ವಾರ್‌ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ನಿನ್ನೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಆಯೋಜಿಸಿದ್ದ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ವಾಗತ. ನೀವು ನಮ್ಮಿಂದ ಸಾಕಷ್ಟು ಕಲಿಯುವುದಿದೆ. ನೀವು ಕರ್ನಾಟಕದಲ್ಲಿರು ಸಮಯದಲ್ಲಿ ದಯವಿಟ್ಟು ಇಂದಿರಾ ಕ್ಯಾಂಟಿನ್ ಹಾಗೂ ರೆಷನ್ ಶಾಪ್‌ಗೆ ಭೇಟಿ ನೀಡಿ. ನಿಮ್ಮ ರಾಜ್ಯದಲ್ಲಿ ಹಸಿವಿನಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳಿಗೆ ಇದು ಸಹಾಯವಾಗಲಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್ ಅವರು, ಆದರದ ಸ್ವಾಗತ ಕೋರಿರುವುದಕ್ಕೆಧನ್ಯವಾದಗಳು ಮುಖ್ಯಮಂತ್ರಿ ಸಿದ್ದರಾಮಯ್ಯಜೀ. ನಿಮ್ಮ ಆಳ್ವಿಕೆಯಲ್ಲಿಯೇ ಕರ್ನಾಟಕದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಎಂದು ಕೇಳಲ್ಪಟ್ಟೆ. ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಹಾಗೂ ಸಾವಿನ ಪ್ರಕರಣಗಳನ್ನು ನಮೂದಿಸಬೇಡಿ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಿಮ್ಮ ಮಿತ್ರಪಕ್ಷಗಳು ಮಾಡಿರುವ ಕೊಳಕನ್ನು ಸ್ವಚ್ಛಗೊಳಿಸಲು ನಾನು ಕೆಲಸ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಎರಡು ರಾಜ್ಯಗಳ ಸಿಎಂಗಳ ಟ್ವೀಟ್ ವಾರ್ ವೈರಲ್ ಆಗಿದ್ದು, ಉಭಯ ನಾಯಕರ ಬೆಂಬಲಿಗರು "#YogiInBengaluru" ಹಾಗೂ #HogappaYogi" ಎಂಬ ಹ್ಯಾಷ್ ಟ್ಯಾಂಗ್ ನೊಂದಿಗೆ ಆರೋಪ,ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಈ ಮಧ್ಯೆ ಟ್ವೀಟ್ ಮಾಡಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಯೋಗಿ ಆದಿತ್ಯನಾಥ್‌ ಅವರು ಬೆಂಗಳೂರಿಗೆ ಬಂದಿದ್ದೇ ತಡ ಹಿಂದೂ ದ್ವೇಷ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧಾರ್ಮಿಕತೆಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ! ಇನ್ನೆರಡು ಬಾರಿ ಯೋಗಿ ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯನವರು 'ಜೈ ಶ್ರೀರಾಮ್‌' ಎಂದು ಘೋಷಣೆ ಕೂಗಿದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.
SCROLL FOR NEXT