ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ
ಬೆಂಗಳೂರು: ಕೇರಳದ ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಎಸ್'ಡಿಪಿಐನ 4 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿರುವ ಕುರಿತು ವರದಿಯಾಗಿರುವ ಹಿನ್ನಲೆಯಲ್ಲಿ ಆ ಸಂಘಟನೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಹೊಂದಿರುವ ನಿಲುವು ಎನೆಂಬುದನ್ನು ಜನತೆಯ ಮುಂದಿಡಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು ಭಾನುವಾರ ಆಗ್ರಹಿಸಿದ್ದಾರೆ.
ಎಬಿವಿಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸಿದ ಕೇರಳ ರಾಜ್ಯ ಪೊಲೀಸರು ನಾಲ್ವರು ಎಸ್'ಡಿಪಿಐ ಸದಸ್ಯರನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳಾಗಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶೋಭಾ ಕರಂದ್ಲಾಜೆಯವರು, ಎಸ್'ಡಿಪಿಐ, ಪಿಎಫ್ಐ ರಾಜಕೀಯ ಸಂಘಟನೆಯಾಗಿದ್ದು, ರಾಜ್ಯದ ಕರಾವಳಿ ಭಾಗ, ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಪಾತ್ರವಹಿಸಿರುವುದು ಕೂಡ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ ಪಕ್ಷವು ಎಸ್'ಡಿಪಿಐ ಕುರಿತು ಹೊಂದಿರುವ ನಿಲುವನ್ನು ಜನತೆಯ ಮುಂದಿಡಬೇಕು ಹಾಗೂ ಕೆಪಿಸಿಸಿ ಅಧ್ಯಕ್ಷರೂ ಕೂಡ ವಿವರಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪಿಎಫ್ಐ ಮತ್ತು ನಿಷೇಧಿತ ಸಿಮಿ ಸಂಘಟನೆಗಳು ಉಗ್ರ ಸಂಘಟನೆಗಳಾಗಿದ್ದು, ದೇಶ ವಿರೋಧಿ ವಿರೋಧಿ ಸಂಘಟನೆಗಳ ಜೊತೆಗೆ ಈ ಸಂಸ್ಥೆಗಳ ನಿಕಟ ಸಂಪರ್ಕವಿದೆ ಎಂದು ಮೊದಲಿನಿದಂಲೂ ಬಿಜೆಪಿ ವಾದಿಸುತ್ತಿದೆ. ಬೆಂಗಳೂರಿನ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತರಾದ ಐವರು ಆರೋಪಿಗಳು ಪಿಎಫ್ಐಗೆ ಸೇರಿದವರಾಗಿದ್ದಾರೆ. ಆದೇ ರೀತಿ ಮಂಗಳೂರಿನ ಶರತ್ ಮಡಿವಾಳ ಹಂತಕರು ಸಹ ಇದೇ ಸಂಘಟನೆಗೆ ಸೇರಿದವರಾಗಿದ್ದಾರೆ.
ಎಸ್'ಡಿಪಿಐ ಜೊತೆಗೆ ಚುನಾವಣಾ ಮೈತ್ರಿಗೆ ಕಾಂಗ್ರೆಸ್ ಯತ್ನ ನಡೆಸುತ್ತಿದೆ. ಈಗಲೂ ಎಸ್'ಡಿಪಿಐ ಕುರಿತು ಕಾಂಗ್ರೆಸ್ ಇದೇ ನಿಲುವನ್ನು ಹೊಂದಿದೆಯೇ ಎನ್ನುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸ್ಪಷ್ಟೀಕರಣ ನೀಡಬೇಕೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics