ರಾಜಕೀಯ

ಬೆಂಗಳೂರು: ಬಜೆಟ್ ಅಧಿವೇಶನ ಒಂದು ದಿನ ವಿಸ್ತರಿಸಲು ಸ್ಪೀಕರ್ ರಮೇಶ್ ಕುಮಾರ್ ಸಮ್ಮತಿ

Shilpa D
ಬೆಂಗಳೂರು: ವಿರೋಧ ಪಕ್ಷದ ಬೇಡಿಕೆಯಂತೆ ಬಜೆಟ್​ ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ವಿಧಾನ ಸಭಾಧ್ಯಕ್ಷ ಕೆ. ಆರ್​ ರಮೇಶ್​ಕುಮಾರ್​ ಒಪ್ಪಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕರ ಜತೆ ಚರ್ಚೆ ನಡೆಸಿದ ನಂತರ ರಮೇಶ್​ ಕುಮಾರ್​ ಅವರು ಸದನದಲ್ಲಿ ಅಧಿವೇಶನ ವಿಸ್ತರಿಸುವ ಮಾಹಿತಿ ನೀಡಿದ್ದಾರೆ.
ಇಂದು ಕೊನೆಗೊಳ್ಳಬೇಕಿದ್ದ ಅಧಿವೇಶನ ನಾಳೆ ಶುಕ್ರವಾರವೂ ನಡೆಯಲಿದ್ದು, ವಿವಿಧ ಸಮಸ್ಯೆಗಳು ಚರ್ಚೆಗೆ ಬರಲಿದೆ. ಬಿಜೆಪಿಯ ಹಲವು ಶಾಸಕರಿಗೆ ಮಾತನಾಡಲು ಅವಕಾಶ ಸಿಗದ ಹಿನ್ನಲೆಯಲ್ಲಿ  ಬಿ.ಎಸ್‌.ಯಡಿಯೂರಪ್ಪ ಅವರು ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ಸ್ವೀಕರ್‌ ರಮೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದ್ದರು. ತುರ್ತಾಗಿ ಕಾರ್ಯ ಕಲಾಪ ಸಮಿತಿಯ ಸಭೆ ಕರೆದ ಸ್ಪೀಕರ್‌ ಸದನವನ್ನು ಒಂದು ದಿನದ ಕಾಲ ವಿಸ್ತರಿಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರ ಪತ್ರಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯನ್ನು 5 ರಿಂದ 7 ಕೆಜಿಗೆ ವಿಸ್ತರಿಸಲು ಸಮ್ಮತಿಸಿದ್ದಾರೆ ಎಂದು ಹೇಳಲಾಗಿದ್ದು, ಅದಕ್ಕೆ ಇಂದು ಸದನದಲ್ಲಿ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. 
SCROLL FOR NEXT