ಎಚ್.ಡಿ ಕುಮಾರ ಸ್ವಾಮಿ 
ರಾಜಕೀಯ

ಸಂಸದರಿಗೆ ದುಬಾರಿ ಬೆಲೆಯ ಐ ಫೋನ್ ಗಿಫ್ಟ್: ಮುಜುಗರಕ್ಕೀಡಾದ ಸಮ್ಮಿಶ್ರ ಸರ್ಕಾರ!

ರಾಜ್ಯದ 40 ಸಂಸದರಿಗೆ ದುಬಾರಿ ಬೆಲೆಯ ಐ ಫೋನ್ ಗಿಫ್ಟ್ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ, ಕಾಂಗ್ರೆಸ್ ಸಚಿವ...

ಬೆಂಗಳೂರು/ ನವದೆಹಲಿ: ರಾಜ್ಯದ 40 ಸಂಸದರಿಗೆ ದುಬಾರಿ ಬೆಲೆಯ ಐ ಫೋನ್ ಗಿಫ್ಟ್ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ, ಕಾಂಗ್ರೆಸ್ ಸಚಿವರು ಐ ಫೋನ್ ಗಿಫ್ಟ್ ನೀಡಿರುವುದು ಮುಖ್ಯಮಂತ್ರಿ ಗಮನಕ್ಕೆ ಬಾರದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ.
ಐ ಫೋನ್ ಗಿಫ್ಟ್  ನಿಂದಾಗಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ವಿವಾದಕ್ಕೆ ಸಿಲುಕಿದೆ, ಉಡುಗೊರೆ ನೀಡಿರುವುದು ನನಗೆ ತಿಳಿದಿಲ್ಲ ಎಂದು ಕುಮಾರ ಸ್ವಾಮಿ ಹೇಳುತ್ತಾರೆ, ಆದರೆ ಸಚಿವ ಡಿ.ಕೆ ಶಿವಕುಮಾರ್ ಗೌರವಾರ್ಥವಾಗಿ ನೀಡಿರುವುದಾಗಿ ಹೇಳಿದ್ದಾರೆ.
ಇಂದು ರಾಜ್ಯದ ಸಂಸದರ ಜೊತೆ ಸಿಎಂ ಕುಮಾರ ಸ್ವಾಮಿ ಸಭೆ ನಡೆಸಲಿದ್ದು, ರಾಜ್ಯದ 40 ಸಂಸದರಿಗೆ ಐಫೋನ್ ಉಡುಗೊರೆ ನೀಡಲಾಗಿದೆ, ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು,  ಕಾವೇರಿ ವಿವಾದ ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳ ಮೇಲೆ  ಬೆಳಕು ಚೆಲ್ಲುವಂತೆ ಸಂಸದ ಜೊತೆ ಚರ್ಚೆ ನಡೆಸಲಾಗಿದೆ,
ಸಂಸದರಿಗೆ ದುಬಾರಿ ಬೆಲೆಯ ಗಿಫ್ಟ್ ನೀಡಲು ಕುಮಾರ ಸ್ವಾಮಿ ಸರ್ಕಾರದಲ್ಲಿ ಹಣವಿದೆ, ಆದರೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಅನುದಾನ ನೀಡಲು ಮತ್ತು ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಕರ್ನಾಟಕ ಬಿಜೆಪಿ  ಟ್ವೀಟ್  ಮಾಡಿದೆ.
ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ತಮಗೆ ನೀಡಿದ್ದ ಉಡುಗೊರೆಯನ್ನು ವಾಪಸ್ ಮಾಡಿ ಸಿಎಂ ಕುಮಾರ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ, ಹತಾಶೆಯಿಂದ ರೈತರು ಮತ್ತು ಪೌರ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ತಾವು ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ
ಆ್ಯಪಲ್ ಐಫೋನ್ ಗಾಗಿ ಸರ್ಕಾರ 1ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದೆ. ಇದನ್ನು ಸ್ವೀಕರಿಸಲು ಸಾದ್ಯವಿಲ್ಲ, ಸಿಎಂ ಕುಮಾರ ಸ್ವಾಮಿ ಸಾರ್ವಜನವಕಿರ ಹಣವನ್ನು ಪೋಲು ಮಾಡದೇ ಪೌರ ಕಾರ್ಮಿಕರ ವೇತನಕ್ಕೆ ನೀಡಬೇಕು ಎಂದು ಹೇಳಿ್ರುವ ಅವರು ಐಫೋನ್ ವಾಪಸ್ ನೀಡಿದ್ದಾರೆ.
ಹಗಲು ರಾತ್ರಿ ಎನ್ನದೇ ನಗರ ಸ್ವಚ್ಚಗೊಳಿಸುವ ಪೌರ ಕಾರ್ಮಿಕರಿದೆಗೆ ಅವರ ವೇತನ ಬಾಕಿ ಪಾವತಿಸಬೇಕೆಂದು ಹೇಳಿದ್ದಾರೆ.
ಈ ಸಂಬಂಧ ನನಗೆ ಯಾವುದೇ ಮಾಹಿತಿಯಿಲ್ಲ, ಇಂಥಹ ಉಡುಗೊರೆ ನೀಡಬೇಕೆಂದು ನಾನು ಯಾವ ಅಧಿಕಾರಿಗೂ ಹೇಳಿಲ್ಲ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ. ಜೊತೆಗೆ ಇದರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಚ್ಚು: ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್‌; ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ CWRC ಆದೇಶ!

'ನೀ ನನಗೆ ಇಷ್ಟ ಇಲ್ಲ': ಮದುವೆಯಾದ ಮೊದಲ ದಿನವೇ ಪತ್ನಿಗೆ ಶಾಕ್​​ ಕೊಟ್ಟ ಪತಿ; ಪ್ರಭಾವಿ ಸಚಿವರ PAಯಿಂದಲೇ ದೋಖಾ?

ನೀಟ್ ರದ್ದುಗೊಳಿಸುವಂತೆ ಆಗ್ರಹಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಜಾರ್ಖಂಡ್‌ ಪರೀಕ್ಷೆ ವಿವಾದ: 18ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: BJPಯಿಂದ ರಾಜ್ಯವ್ಯಾಪಿ ಬಂದ್, ABVP ಕಾರ್ಯಕರ್ತರು ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬಾರ್ ಕ್ಯಾಷಿಯರ್‌ಗೆ ಬೆದರಿಕೆ; ಇಬ್ಬರು ಉದ್ಯಮಿಗಳು, ಪ್ರಭಾವಿ ಮಹಿಳೆ ಮೇಲೆ ಕಣ್ಣಿಟ್ಟ ಪೊಲೀಸರು!