ಬಸನಗೌಡ ಪಾಟೀಲ್ ಯತ್ನಾಳ್ 
ರಾಜಕೀಯ

ನಾನು ಗೃಹಮಂತ್ರಿಯಾದರೆ ಬುದ್ಧಿಜೀವಿಗಳಿಗೆ ಗುಂಡು ಹಾರಿಸಲು ಆದೇಶಿಸುತ್ತೇನೆ: ಯತ್ನಾಳ್‌

ಬುದ್ಧಿ ಜೀವಿಗಳಿಂದಲೇ ನಮ್ಮ ದೇಶ ಹಾಳಾಗಿದೆ. ನಾನು ಗೃಹಮಂತ್ರಿಯಾದರೆ ಅವರ ಮೇಲೆ ಗುಂಡು ಹಾರಿಸಿ ಸಾಯಿಸಿ....

ವಿಜಯಪುರ: ಬುದ್ಧಿ ಜೀವಿಗಳಿಂದಲೇ ನಮ್ಮ ದೇಶ ಹಾಳಾಗಿದೆ. ನಾನು ಗೃಹಮಂತ್ರಿಯಾದರೆ ಅವರ ಮೇಲೆ ಗುಂಡು ಹಾರಿಸಿ ಸಾಯಿಸಿ ಎಂದು ಆದೇಶಿಸುತ್ತಿದ್ದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುರುವಾರ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ 19ನೇ ಕಾರ್ಗಿಲ್ ವಿಜಯೋತ್ಸವ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್,  ದೇಶದ್ರೋಹಿ ಸಂಘಟನೆಗಳಿಂದ ನಮ್ಮ ದೇಶ ಹಾಳಾಗುತ್ತಿದೆ. ರಾಜಕಾರಣಿಗಳು ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಯೋಧರು 60 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೆಲಸ ಮಾಡುತ್ತಾರೆ. ಆದರೆ, ನಾವು ಮೂರು ಕಿ.ಮೀ. ಹೋಗೋಕೆ ಪರದಾಡ್ತೀವಿ. ಇದು ನಮ್ಮ ದೇಶದ ದುರಂತ ಎಂದರು.
ತಮ್ಮ ಭಾಷಣದುದ್ದಕ್ಕೂ ಬುದ್ದಿ ಜೀವಿಗಳು ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ್, ಕಾಶ್ಮೀರದಲ್ಲಿರುವ ಜನರು ಕೂಡಾ ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ. ಆದರೆ ಅಂತಹವರಿಗೆ ದೇಶದ ಕೆಲವರು ಬೆಂಬಲ ಕೊಡುತ್ತಾರೆ ಎಂದರು.
ನಮ್ಮ ದೇಶದ ಗಡಿ ಕಾಯುವ, ದೇಶವನ್ನು ರಕ್ಷಿಸುವ ಯೋಧರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ಕೊಡುತ್ತಾರೆ. ಸೈನಿಕರು ಸಾಯೋಕೆ ಗಡಿಭಾಗಕ್ಕೆ ಹೋಗುತ್ತಾರೆ ಎಂದು ಅವಮಾನಿಸುತ್ತಾರೆ ಎಂದು ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel