ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಜೆಡಿಎಸ್ ಬಿಬಿಎಂಪಿಯಲ್ಲಿ ಮೇಯರ್ ಹುದ್ದೆ ಪಡೆದುಕೊಳ್ಳಲು ಯತ್ನ ನಡೆಸುತ್ತಿದೆ.
2015 ರಲ್ಲಿ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹಮ್ಮಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಬಿಜೆಪಿ ಅಧಿಕಾರದಿಂದ ದೂರ ಉಳಿಯಬೇಕಾಯಿತು.
ಬಿಜೆಪಿ101, ಕಾಂಗ್ರೆಸ್ 76 ಹಾಗೋೂ ಜೆಡಿಎಸ್ 14ಸೀಟುಗಳನ್ನು ಬಿಬಿಎಂಪಿ ಚುನಾವಣೆಯಲ್ಲೆ ಗೆದ್ದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್ ಗೆ ಮೇಯರ್ ಪಟ್ಟ ಹಾಗೂ ಜೆಡಿಎಸ್ ಗ ಉಪಮೇಯರ್ ಪಟ್ಟ ದೊರಕಿತು,
ಬಿಬಿಎಂಪಿಯಲ್ಲಿ ಬಿಜೆಪಿಗೆ ಸರಳ ಬಹುಮತವಿತ್ತು. ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಮೇಯರ್ ಚುನಾವಣೆಗೆ ಮತದಾನ ಮಾಡುವ ಅವಕಾಶವಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯದ್ದು ಬಹುಮತ ಹೆಚ್ಚಿತು.
ಮೈಯರ್ ಚುನಾವಣೆಗೆ 266 . ಮತಗಳ ಅಗತ್ಯವಿದೆ, 2015 ರಲ್ಲಿ ಮೈತ್ರಿ ರಚನೆಯಾದ ದಿನದಿಂದ ಮೇಯರ್ ಹುದ್ದೆ ಕಾಂಗ್ರೆಸ್ ಪಾಲಾಾಗಿತ್ತು, ಆದರೆ ಜೆಡಿಎಸ್ ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ಸ್ವಾಭಾವಿಕವಾಗಿ ಜೆಡಿಎಸ್ ಮಂದಿ ಮೇಯರ್ ಹುದ್ದೆ ಬಯಸುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನು 1 ವರ್ಷ ಬಾಕಿ ಇರುವ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿ ಮೇಲೆ ಹಿಡಿತ ಸಾಧಿಸಲು ಜೆಡಿಎಸ್ ಹವಣಿಸುತ್ತಿದೆ.
ಕಳೆದ ಮೂರು ವರ್ಷಗಳಿಂದ ನಾವು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾ ಬಂದಿದ್ದೇವೆ, ಅವರು ಮೇಯರ್ ಹುದ್ದೆ ಅನುಭವಿಸುತ್ದಿದಾರೆ. ಈಗ ಜೆಡಿಎಸ್ ಸರದಿಯಾಗಿದ್ದು, ಅದನ್ನು ಅವರು ನೀಡಬೇಕು ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ ಶರವಣ ಹೇಳಿದ್ದಾರೆ.
ಈ ಸಂಬಂಧ ನಾವು ಪಕ್ಷದ ನಾಯಕರ ಜೊತೆ ಚರ್ಚಿಸಲಿದ್ದು, ಪಕ್ಷದ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಶಾಸಕ ಗೋಪಾಲಯ್ಯ ಹೇಳಿದ್ದಾರೆ. ಪ್ರಸ್ತುತ ಮೇಯರ್ ಆಗಿರುವ ಕಾಂಗ್ರೆಸ್ ನ ಸಂಪತ್ ರಾಜ್ ಅಧಿಕಾರ ಇನ್ನು ಮೂರು ತಿಂಗಳಲ್ಲಿ ಕೊನೆಗೊಳ್ಳಲಿದೆ.
ಕಳೆದ 2 ವರ್ಷಗಳಿಂದ ಮೇಯರ್ ಹುದ್ದೆಗಾಗಿ ಜೆಡಿಎಸ್ ಬೇಡಿಕೆ ಇಟ್ಟಿದೆ, ಆದರೆ ಅವರಿಗೆ ಸ್ಥಾಯಿ ಸಿಮಿತಿ ಮತ್ತು ತೆರಿಗೆ ಹಾಗೂ ಹಣಕಾಸು ಸಮಿತಿ ಸದಸ್ಯ ಸ್ಥಾನ ಹಾಗೂ ಉಪಮೇಯರ್ ಹುದ್ದೆ ನೀಡಿದ್ದೆವು. ಆದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಮುಖ್ಯಮಂತ್ರಿಯಿರುವುದರಿಂದ ಮೇಯರ್ ಹುದ್ದಗೆ ಡಿಮ್ಯಾಂಡ್ ಇಟ್ಟಿದೆ ಎಂದು ಕಾಂಗ್ರೆಸಸೆ ನಾಯಕರೊಬ್ಬರು ತಿಳಿಸಿದ್ದಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics