ಬೆಂಗಳೂರು: ನೂತನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಕಾಂಗ್ರೆಸ್ ನಿಂದ 15 ಮತ್ತು ಜೆಡಿಎಸ್ ನ 10 ಮಂದಿ ಸಚಿವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
ಬೆಂಗಳೂರಿನ ರಾಜಭವನದಲ್ಲಿರುವ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಕಾಂಗ್ರೆಸ್ ಪಕ್ಷದ ನೂತನ ಸಂಪುಟ ಸಚಿವರ ಹೆಸರುಗಳು ಇಂತಿವೆ:
ಆರ್.ವಿ.ದೇಶಪಾಂಡೆ
ಡಿ.ಕೆ.ಶಿವಕುಮಾರ್
ಕೆ.ಜೆ. ಜಾರ್ಜ್
ಕೃಷ್ಣಬೈರೇಗೌಡ
ಶಿವಶಂಕರ ರೆಡ್ಡಿ
ರಮೇಶ್ ಜಾರಕಿಹೊಳಿ
ಪ್ರಿಯಾಂಕ್ ಖರ್ಗೆ
ಯು.ಟಿ.ಖಾದರ್
ಜಮೀರ್ ಅಹ್ಮದ್
ಶಿವಾನಂದ ಪಾಟೀಲ್
ವೆಂಕಟರಮಣಪ್ಪ
ರಾಜಶೇಖರ್ ಪಾಟೀಲ್
ಪುಟ್ಟರಂಗಶೆಟ್ಟಿ
ಶಂಕರ್
ಜಯಮಾಲ
ಜೆಡಿಎಸ್ ನೂತನ ಸಚಿವರ ಪಟ್ಟಿ
ಎಚ್.ಡಿ.ರೇವಣ್ಣ
ಬಂಡೆಪ್ಪ ಕಾಶೆಂಪುರ
ಜಿ.ಟಿ.ದೇವೇಗೌಡ
ಮನಗೂಳಿ
ಗುಬ್ಬಿ ಶ್ರೀನಿವಾಸ್
ವೆಂಕಟರಾವ್ ನಾಡಗೌಡ
ಸಿ.ಎಸ್.ಪುಟ್ಟರಾಜು
ಸಾ.ರಾ.ಮಹೇಶ್
ಎನ್.ಮಹೇಶ್
ಡಿ.ಸಿ.ತಮ್ಮಣ್ಣ
ನೂತನ ಸರ್ಕಾರದಲ್ಲಿ 9 ಮಂದಿ ಒಕ್ಕಲಿಗ ಸಮುದಾಯದಿಂದ, ಲಿಂಗಾಯತರಿಗೆ 4,ಉಪ್ಪಾರ, ಈಡಿಗ ಸಮುದಾಯಕ್ಕೆ ತಲಾ ಒಂದು, ಅಲ್ಪಸಂಖ್ಯಾತರಲ್ಲಿ ಮೂವರಿಗೆ, ಬ್ರಾಹ್ಮಣ ಸಮುದಾಯದಲ್ಲಿ ಒಬ್ಬರಿಗೆ, ಕುರುಬ ಜಾತಿಯ ಇಬ್ಬರಿಗೆ ಮತ್ತು ಒಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಿದ್ದು, ಈ ಬಾರಿ ಜಾತಿ ಲೆಕ್ಕಾಚಾರ ಪ್ರಮುಖ ಅಂಶವಾಗಿ ಕಂಡುಬರುತ್ತಿದೆ.