ರಾಜಕೀಯ

ಟ್ರಾಫಿಕ್ ಜಾಮ್ ನಿಂದ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಗೈರು: ಸಿಎಸ್ ಗೆ ಸ್ಪೀಕರ್‌ ತರಾಟೆ

Lingaraj Badiger
ಬೆಂಗಳೂರು: ರಾಜಭವನ ಸುತ್ತ ಟ್ರಾಫಿಕ್ ಜಾಮ್ ಆಗಿದ್ದರಿಂದ ಕಾಂಗ್ರೆಸ್‌ - ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಆದ ವಿಧಾನಸಭೆ ಸ್ಪೀಕರ್ ರಮೇಶ್‌ ಕುಮಾರ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ರಾಫಿಕ್ ಜಾಮ್ ಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ರಮೇಶ್ ಕುಮಾರ್ ಅವರು, ರಾಜಭವನಕ್ಕೆ ಬಂದು ಅರ್ಧ ಗಂಟೆ ಕಾದರೂ ಸಮಾರಂಭಕ್ಕೆ ಆಗಮಿಸಲು ಅವಕಾಶ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಮುಖ್ಯ ಕಾರ್ಯದರ್ಶಿಯವರ ಅಕ್ಷಮ್ಯ ಅಪರಾಧಕ್ಕೆ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇನೆ ಎಂದು ರಮೇಶ್‌ ಕುಮಾರ್‌ ಪತ್ರದಲ್ಲಿ ತಿಳಿಸಿದ್ದಾರೆ. 
ಮುಖ್ಯ ಕಾರ್ಯದರ್ಶಿ ಆಹ್ವಾನದ ಮೇರೆಗೆ ಸಮಾರಂಭಕ್ಕೆ ಆಗಮಿಸಿದ್ದೇ. ರಾಜಭವನದ ಮುಂದೆ ಅರ್ಧ ಗಂಟೆ ಕಾದರೂ ಒಳಗೆ ಬರಲಾಗದೆ ವಾಪಸ್‌ ಹಿಂದಿರುಗಿದ್ದೇನೆ. ರಾಜಭವನದ ಒಳಗೂ ಹೊರಗೂ ತುಂಬಿದ್ದ ಜನರು, ಹೊರಗಡೆ ಇದ್ದ ವಾಹನಗಳು ಅತಿಯಾಗಿದ್ದವು. ಇವರಿಗೆ ಅನುಮತಿ ನೀಡಿದವರಾರೂ. ಅಧಿಕಾರಿಗಳ ದುರಂಹಕಾರ, ಅಜ್ಞಾನ, ರಾಜಭವನದ ಒಳಗೆ ಇರುವ ಅಧಿಕಾರಿಗಳ ದುರಂಹಕಾರದಿಂದಾಗಿ ಸಮಾರಂಭಕ್ಕೆ ಹಾಜರಾಗಲು ಆಗಲಿಲ್ಲ ಎಂದು ರಮೇಶ್‌ ಕುಮಾರ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
SCROLL FOR NEXT