ರಾಜಕೀಯ

ಚುನಾವಣೆ ವ್ಯಾಪಾರವಾದರೆ ಆಡಳಿತ ವ್ಯವಸ್ಥೆಯೂ ವ್ಯಾಪಾರವಾಗುತ್ತದೆ: ಉಪ್ಪಿ ಟ್ವೀಟ್

Raghavendra Adiga
ಬೆಂಗಳೂರು: ನಟ ಉಪೇಂದ್ರ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. 
ಅವರು ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದು ಆ ಪಕ್ಷವು ಚುನಾವಣಾ ಆಯೋಗದಲ್ಲಿ ನೊಂದಣಿಯಾಗಿದೆ ಎಂದು ಮೇ 10ರಂದು ಸಂತಸ ಹಂಚಿಕೊಂಡಿದ್ದರು. 
ಮತ್ತೆ ಇದೀಗ ಚುನಾವಣೆ ವ್ಯಾಪಾರ ಆದಾಗ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ ಉಪ್ಪಿ  ಹಾಗಾದಾರ  ಶಿಕ್ಷಣ ವ್ಯವಸ್ಥೆ ವ್ಯಾಪಾರವಾಗುತ್ತದೆ, ಆರೋಗ್ಯ ವ್ಯವಸ್ಥೆ ವ್ಯಾಪಾರವಾಗುತ್ತದೆ, ಆಡಳಿತ ವ್ಯವಸ್ಥೆ ವ್ಯಾಪಾರವಾಗುತ್ತದೆ ಎನ್ನುತ್ತಾರೆ.
ಜತೆಗೆ ಈ ವ್ಯಾಪಾರ ರಾಜಕಾರಣ ಬೇಡ. ವಿಚಾರಗಳ ಪ್ರಜಾಕಾರಣ ಬೇಕು ಎಂದಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಹಿಂದೆ ತಾವೇ ಸ್ಥಾಪಿಸಿದ್ದ ಪ್ರಜಾಕೀಯ ಪಕ್ಷದಿಂದ ಹೊರಬಂದಿದ್ದರು. ಮತ್ತೆ ’ಉತ್ತಮ ಪ್ರಜಾಕೀಯ’ ಹೆಸರಿನ ಪಕ್ಷಕ್ಕೆ ಮಾನ್ಯತೆ ದೊರಕಿಸಿಕೊಳ್ಳಲು ದೆಹಲಿಗೆ ತೆರಳಿದ್ದ ಅವರು ಚುನಾವಣಾ ಆಯೋಗದಲ್ಲಿ ತಮ್ಮ ನೂತನ ಪಕ್ಷದ ನೊಂದಾವಣೆ ಮಾಡಿಸಿದ್ದಾರೆ.
SCROLL FOR NEXT