ಕುಮಾರ ಸ್ವಾಮಿ ಮತ್ತು ಡಿ,ಕೆ ಶಿವಕುಮಾರ್ 
ರಾಜಕೀಯ

ವಿಧಾನಸೌಧದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ: ಹೊರಗೆ 2 ಪಕ್ಷಗಳ ಕಾರ್ಯಕರ್ತರ ಜಂಗಿ ಕುಸ್ತಿ!

ಜೆಡಿಎಸ್ -ಕಾಂಗ್ರೆಸ್ ಒಟ್ಟಾಗಿ ಸೇರಿ ಸರ್ಕಾರ ರಚಿಸಿ ಆಡಳಿತ ನಡೆಸಲು ಮುಂದಾಗಿವೆ, ಜೊತೆಗೆ ಸರ್ಕಾರ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ ...

ಮೈಸೂರು: ಜೆಡಿಎಸ್ -ಕಾಂಗ್ರೆಸ್ ಒಟ್ಟಾಗಿ ಸೇರಿ ಸರ್ಕಾರ ರಚಿಸಿ ಆಡಳಿತ ನಡೆಸಲು ಮುಂದಾಗಿವೆ, ಜೊತೆಗೆ ಸರ್ಕಾರ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ 2 ಪಕ್ಷಗಳ ಮುಖಂಡರ ಸೇರಿ ಸಮನ್ವಯ ಸಮಿತಿ ರಚಿಸಲಾಗಿದೆ.
ಆದರೆ ಈ ಮೈತ್ರಿ ಪಕ್ಷಗಳ ದೋಸ್ತಿ ಕೇವಲ ವಿಧಾನಸೌಧಕ್ಕೆ ಮಾತ್ರ ಸೀಮಿತವಾಗಿದೆ, ಹಲವು ಜಿಲ್ಲೆಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಇನ್ನೂ ಒಂದಾಗುವ ಮನಸ್ಥಿತಿಗೆ ಬಂದಿಲ್ಲ.,
ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈಸೂರು ಭಾಗದಲ್ಲಿ ಹೀನಾಯ ಸೋಲು ಕಂಡಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಹಾಗೂ ಪಕ್ಷ ಬಲ ಪಡಿಸಲು ಕಾರ್ಯಕರ್ತರು ಮುಂದಾಗಿಲ್ಲ,
ಸಮ್ಮಿಶ್ರ ಸರ್ಕಾರ ದೀರ್ಘಕಾಲ ಉಳಿಯುವುದಿಲ್ಲ ಮತ್ತೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮೈಸೂರು, ಮಂಡ್ಯ ಹಾಸನ ಜನತೆ ಭಾವಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಇನ್ನೂ ಪ್ರಾಬಲ್ಯ ಸಾಧಿಸಿಲ್ಲ,.
ಕಾಂಗ್ರೆಸ್ ನಿಂದ  ಸ್ಪರ್ಧಿಸಿ ಪರಾಭವಗೊಂಡ ಅಭ್ಯರ್ಥಿ ಕೆ. ವೆಂಕಟೇಶ್ ತಮ್ಮ ಬೆಂಬಲಿಗರಿಗೆ  ಕಾನೂನು ಕೈಗೆತ್ತಿಕೊಳ್ಳಲು ಸೂಚಿಸಿದರೇ, ಜೆಡಿಎಸ್ ನಾಯಕರು ತಮ್ಮ ದೇಹ ಶಕ್ತಿ ತೋರಿಸಲು ಮುಂದಾಗಿದ್ದಾರೆ.
ಹಿಂದಿನ ಸರ್ಕಾರದಲ್ಲಿ  ಶಾಸಕರಾಗಿದ್ದ ವೆಂಕಟೇಶ್ ಕಾಮಗಾರಿಯೊಂದಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು., ಆದರೆ  ಈಗ ಆಯ್ಕೆಯಾಗಿರುವ ಜೆಡಿಎಸ್ ಶಾಸಕ ಕೆ. ಮಹಾದೇವ್ ಅದೇ ಕಾಮಗಾರಿಗೆ ಮತ್ತೆ ಭೂಮಿ ಪೂಜೆ ನೆರವೇರಿಸಿದ್ದನ್ನು ವಿರೋಧಿಸಿ ಪಿರಿಯಾಪಟ್ಚಣ ಕಾಂಗ್ರೆಸ್  ಕಾರ್ಯಕರ್ತರು ಬೆಳ್ತೂರಿನಲ್ಲಿ ಪ್ರತಿಭಟನೆ ನಡೆಸಿದರು, ಹಿಂದಿನ ಶಾಸಕರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತೆ ಮಾಡಲು ಹೊರಟಿದ್ದು ಎರಡು ಪಕ್ಷಗಳ ಘರ್ಷಣೆಗೆ ಕಾರಣವಾಗಿತ್ತು., ಪೊಲೀಸರ ಮಧ್ಯಸ್ಥಿಕೆಯಿಂದಾಗಿ  ಗ್ರಾಮದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿ ಸುಧಾರಿಸಿದೆ.
ಶಾಸಕ ಮಹಾದೇವ್ ಭೂಮಿ ಪೂಜೆ ನೆರವೇರಿಸಿ ಅಲ್ಲಿಂದ ತೆರಳಿದರು. ಇದಾದ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ರಾಜಕೀಯ ದ್ವೇಷಕ್ಕಾಗಿ ಘರ್ಷಣೆ ಆರಂಭವಾಗಿತ್ತು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಪಕ್ಷದ ನಾಯಕರು ಏಕತೆ ಪ್ರದರ್ಶಿಲಿಲ್ಲ, 
ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ 93.500 ಮತ ಪಡೆದೂ ಜೆಡಿಎಸ್ ನ ಸಾ ರಾ ಮಹೇಶ್ ವಿರುದ್ಧ 2ಸಾವಿರ ಮತಗಳ ಅಂತರದಿಂದ ಸೋತಿದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾರೆ,  ಹನಗೋಡು ಜಿಲ್ಲಾ ಪಂಚಾಯಿತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜೆಡಿಎಸ್ ಅಭ್ಯರ್ಥಿ 1 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು