ರೆಡ್ಡಿ-ಯಡ್ಡಿ 
ರಾಜಕೀಯ

ಯಡ್ಡಿ-ರೆಡ್ಡಿ ತಂಡ ಮತ್ತೆ ಕರ್ನಾಟಕವನ್ನು ಲೂಟಿ ಮಾಡಲು ಅಧಿಕಾರಕ್ಕೆ ಮರಳಲು ಯತ್ನ: ಕಾಂಗ್ರೆಸ್

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮತ್ತೆ ಕರ್ನಾಟಕವನ್ನು ಲೂಟಿ ಮಾಡಲು ಅಧಿಕಾರಕ್ಕೆ ಮರಳಲು ಯತ್ನಿಸುತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ...

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮತ್ತೆ ಕರ್ನಾಟಕವನ್ನು ಲೂಟಿ ಮಾಡಲು ಅಧಿಕಾರಕ್ಕೆ ಮರಳಲು ಯತ್ನಿಸುತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐನಿಂದ ಕ್ಲೀನ್ ಚೀಟ್ ಕೊಡಿಸಿದೆ. ಆ ಮೂಲಕ ಮತ್ತೊಮ್ಮೆ ಕರ್ನಾಟಕವನ್ನು ಲೂಟಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಆರೋಪಿಸಿದೆ. 
ಮಾಜಿ ಸಚಿವ ಜನಾರ್ದನ ರೆಡ್ಡಿ ಸಹೋದರರು ಹಾಗೂ ಸಂಬಂಧಿಗಳಿಗೆ 8 ಕ್ಷೇತ್ರಗಳ ಟಿಕೆಟ್ ನೀಡುವ ಮೂಲಕ 'ಸಾರ್ವಜನಿಕರ ಹಣ ಲೂಟಿ' ಮತ್ತು 'ನೈಸರ್ಗಿಕ ಸಂಪನ್ಮೂಲಗಳ ಲೂಟಿ' ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ದುಷ್ಟ ಪಿತ್ತೂರಿ ಮಾಡಲಾಗಿದ್ದು ಇದನ್ನು ವಿವರಿಸುತ್ತಾರೆ ಎಂದು ಶುಕ್ಲಾ ಪ್ರಶ್ನಿಸಿದ್ದಾರೆ. 
ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರು ಎಲ್ಲಾ ವಿಧದ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಭ್ರಷ್ಟಾಚಾರ ಆರೋಪಗಳ ಮೇಲೆ ಕೆಲವು ವರ್ಷಗಳ ಹಿಂದೆ ಪಕ್ಷದ ವಜಾ ಮಾಡಿದ್ದರಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು. 
ಯಡ್ಡಿ ಮತ್ತು ರೆಡ್ಡಿ ತಂಡ ಕರ್ನಾಟಕ ರಾಜಕೀಯಕ್ಕೆ ಮತ್ತೆ ಮರಳಿದೆ. ಬಿಜೆಪಿಯ ಉನ್ನತ ನಾಯಕತ್ವಕ್ಕೆ ಧನ್ಯವಾದಗಳು. ಯಡ್ಡಿ ಮತ್ತು ರೆಡ್ಡಿ ತಂಡ ಮತ್ತೆ ಕರ್ನಾಟಕವನ್ನು ಆಳಲು ಬಯಸುತ್ತಾರೆ ಮತ್ತು ಅವರು ಕರ್ನಾಟಕ ರಾಜ್ಯದ ಅತ್ಯಮೂಲ್ಯ ಸ್ವತ್ತುಗಳನ್ನು ಲೂಟಿ ಮಾಡಲು ಬಯಸುತ್ತಾರೆ ಎಂದು ಶುಕ್ಲಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ, ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ಭಾರೀ ದಾಖಲೆ ನಿರ್ಮಿಸಿದ Virat Kohli

IPL 2026: ರನ್ ಮೆಷಿನ್ Virat Kohli ದಾಖಲೆಯನ್ನೇ ಮುರಿದು ಐತಿಹಾಸಿಕ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ!

ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರತಿಮೆ ಸ್ಥಾಪನೆಗೆ ವಿಳಂಬ: ಯೋಗಿಗೆ ರಕ್ತದಲ್ಲಿ ಪತ್ರ ಬರೆದ SP ಶಾಸಕ!

ಬೌಂಡರಿ ತಡೆದ್ರೆ ಬಿಡ್ತೀವಾ.. 42 ಡಿಗ್ರಿ ತಾಪಮಾನದಲ್ಲೂ 4 ರನ್ ಓಡಿಸಿದ Virat Kohli, ಹೈರಾಣಾದ DDP, ವೈರಲ್ ವಿಡಿಯೋ ಅಸಲೀಯತ್ತು ಬಯಲು

SCROLL FOR NEXT