ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ: ಜನತೆಯನ್ನುದ್ದೇಶಿಸಿ ಭಾಷಣ 
ರಾಜಕೀಯ

ಓಬವ್ವಳ ಸಾಧನೆ ಮರೆತ ಕಾಂಗ್ರೆಸ್, ಸುಲ್ತಾನರ ಜಯಂತಿ ಮಾಡುತ್ತಿದೆ; ಪ್ರಧಾನಿ ಮೋದಿ

ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಯನ್ನುದ್ದೇಶಿ ಮಾತನಾಡುತ್ತಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ...

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಯನ್ನುದ್ದೇಶಿ ಮಾತನಾಡುತ್ತಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಚಿತ್ರದುರ್ಗದ ಜನರಿಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ಮದಕರಿ ನಾಯಕ ಓಬವ್ವಳ ಸಾಧನೆ ಮರೆತಿರುವ ಕಾಂಗ್ರೆಸ್, ಮತಕ್ಕಾಗಿ ಸುಲ್ತಾನರ ಜಯಂತಿಯನ್ನು ಆಚರಣೆ ಮಾಡುತ್ತಿದೆ ಎಂದು ಹೇಳಿದ್ದಾರೆ. 
ವೀರ ಮದಕರಿ ನಾಯಕ, ವೀರ ವನಿತೆ ಓಬವ್ವ, ಮಾದರ ಚನ್ನಯ್ಯ, ಮರುಘಾ ಶರಣರಿಗೆ ನಮನಗಳನ್ನು ಸಲ್ಲಿಸಿ ಭಾಷಣ ಆರಂಭಿಸಿದ ಮೋದಿಯವರು, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದರು. 
100 ವರ್ಷ ತೆಗೆದುಕೊಂಡರೆ ಚಿತ್ರದುರ್ಗದಲ್ಲಿ 70 ವರ್ಷ ಬರಗಾಲವಿರುತ್ತದೆ. ಆದರೂ, ಇಲ್ಲಿನ ರೈತರು ಕಷ್ಟಪಟ್ಟು ವ್ಯವಸಾಯ ಮಾಡುತ್ತಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ಮುಂದಿನ ದಿನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಇಸ್ರೋ, ಡಿಆರ್'ಡಿಒ, ಬಾರ್ಕ್ ಮುಂತಾದ ಸಂಸ್ಥೆಗಳು ಇಲ್ಲಿನ ಹೆಸರನ್ನು ಉಜ್ವಗೊಳಿಸಲಿವೆ. ಡಿಆರ್'ಡಿಒ ವೈಮಾನಿಕ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿವೆ. ಇಸ್ರೋ ಚಂದ್ರಯಾನ ಭಾಗ-2ರ ಯೋಜನೆಯನ್ನು ಇಲ್ಲಿಂದ ಮಾಡಲಾಗುತ್ತಿದೆ. 
ಓನಕೆ ಓಬವ್ವ ಅವರಿಗೆ ಈ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸುತ್ತೇನೆ. ಧೈರ್ಯವಿದ್ದರೆ ಶತ್ರುಗಳನ್ನು ಹೇಗೆ ಸದೆ ಬಡಿಯಬಹುದು ಎಂಬುದುನ್ನು ಅವರಿಂದ ಕಲಿಯಬಹುದು. ಕಾಂಗ್ರೆಸ್ ಪಕ್ಷ ಇಂದು ಧರ್ಮ ಹಾಗಾ ಜಾತಿಗಳನ್ನು ವಿಭಜನೆ ಮಾಡಿ ಇತಿಹಾಸವನ್ನು ತಿರುಚುವ ಯತ್ನ ಮಾಡುತ್ತಿದೆಯ ಯಾರ ಜಯಂತಿಯನ್ನು ಆಚರಿಸಬೇಕೆಂಬುದು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಓಬವ್ವಳನ್ನು ಮರೆತ ಕಾಂಗ್ರೆಸ್ ಮತಕ್ಕಾಗಿ ಸುಲ್ತಾನರ ಜಯಂತಿಯನ್ನು ಆಚರಿಸುತ್ತಿದೆ. ಚಿತ್ರದುರ್ಗ ಜನತೆಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ಮದಕರಿ ನಾಯಕ ಹಾಗೂ ಓಬವ್ವಳ ಸಾಧನೆಯನ್ನು ಮರೆತು ಜನರಿಗೆ ಅವಮಾನ ಮಾಡಿದೆ. ಕಾಂಗ್ರೆಸ್ ಮಾಡಿದ ಈ ಅವಮಾನವನ್ನು ಚಿತ್ರದುರ್ಗ ಜನತೆ ಎಂದಿಗೂ ಮರೆಯುವುದಿಲ್ಲ. 
ಚಿತ್ರದುರ್ಗದವರಾದ ಕಾಂಗ್ರೆಸ್ ಅಧ್ಯಕ್ಷ ಎಸ್.ನಿಜಲಿಂಗಪ್ಪ ಅವರನ್ನು ಪಕ್ಷ ಹೇಗೆ ನಡೆಸಿಕೊಂಡಿತ್ತು ಎಂಬುದನ್ನು ಜನರು ತಿಳಿದುಕೊಳ್ಳಬೇಕು. ದೆಹಲಿಯಲ್ಲಿ ಕುಳಿತ ನಾಯಕರು ನಿಜಲಿಂಗಪ್ಪ ಅವರನ್ನು ಬೆಳೆಯದಂತೆ ಮಾಡಿದರು. ನಿಜಲಿಂಗಪ್ಪ ಅವರ ತಪ್ಪು ಏನು ಗೊತ್ತೇ? ಅವರು ನೆಹರೂ ಸರ್ಕಾರದ ನೀತಿಗಳನ್ನು ಟೀಕಿಸಿದ್ದು. ಆರ್ಥಿಕ ನೀತಿ ವಿರೋಧಿಸಿದ್ದು. ಹೀಗಾಗಿಯೇ ಕಾಂಗ್ರೆಸ್ ಅವರನ್ನು ಬೆಳೆಯಲು ಬಿಡಲಿಲ್ಲ.
ನಿಜಲಿಂಗಪ್ಪ ಮತ್ತು ಅಂಬೇಡ್ಕರ್ ದಲಿತರು ಹಾಗೂ ಬಡವರ ಪರವಾಗಿ ಕೆಲಸ ಮಾಡುತ್ತಿದ್ದರು. ಅವರ ಏಳಿಕೆಗಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಾಂಗ್ರೆಸ್ ಅವರಿಗೆ ಗೌರವ ನೀಡಲಿಲ್ಲ. ಕಾಂಗ್ರೆಸ್ ಪಕ್ಷದ ವಂಶಪಾರಂಪರ್ಯ ಆಡಳಿತ ನಡೆಸಿದೆ. ದೆಹಲಿಯಲ್ಲಿ ಎಲ್ಲಿ ಹೋದರೂ ಒಂದೇ ಕುಟುಂಬದವರ ಪ್ರತಿಮೆಗಳು ಕಾಣುತ್ತದೆ. 
ವಾಜಪೇಯಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಜಾತಿ, ಧರ್ಮವನ್ನು ನೋಡಲಿಲ್ಲ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದೆವು. ಮೋದಿ ಪ್ರಧಾನಿಯಾದಾಗ ಮತ್ತೊಮ್ಮೆ ರಾಷ್ಟ್ರಪತಿಯಾಗಿ ಅವರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿತು. ಆಗ ಬಡತನದಲ್ಲಿ ಹುಟ್ಟು ಬೆಳೆದ ದಲಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದೆವು. 
ಕಾಂಗ್ರೆಸ್ ಪಕ್ಷಕ್ಕಿ ಇದೀಗ ಭಯ ಪಡುತ್ತಿದೆ. ಅವರ ವೋಟ್ ಬ್ಯಾಂಕ್ ನಡೆಯುವುದಿಲ್ಲ. ದಲಿತರ, ಬಡವರ ಕಷ್ಟಗಳು ನನಗೆ ಗೊತ್ತಿದೆ. ನಾನು ನಿಮ್ಮ ನಡುವಿನಲ್ಲೇ ಬೆಳೆದು ಬಂದ ವ್ಯಕ್ತಿ. ಆದ್ದರಿಂದ ನಿಮ್ಮ ಅಭಿವೃದ್ಧಿಯೇ ನನ್ನ ಬದ್ಧತೆ ಎಂದು ತಿಳಿಸಿದ್ದಾರೆ. 
ಕರ್ನಾಟಕ ಮುಖ್ಯಮಂತ್ರಿ ಸೂಟ್ ಕೇಸ್ ನಲ್ಲಿ ಸಭ್ಯತೆಯ ಪ್ರಮಾಣ ಪತ್ರವಿಟ್ಟುಕೊಂಡು ಓಡಾಡುತ್ತಾರೆ. ಯಾವುದೇ ಸಚಿವರ ವಿರುದ್ಧ ಆರೋಪ ಕೇಳಿಬಂದರೆ ಪ್ರಮಾಣಪತ್ರದಲ್ಲಿ ಅವರ ಹೆಸರು ಬರೆದು ಕ್ಲೀನ್ ಚಿಟ್ ಕೊಡುತ್ತಾರೆಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!